Thursday, April 25, 2024
spot_imgspot_img
spot_imgspot_img

ವಿಟ್ಲ: ನೂತನ “ಝೆನ್ ಟೆಕ್ಸ್ ಟೈಲ್ಸ್” ಉದ್ಘಾಟನೆ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ನ ಪ್ರಥಮ ಮಹಡಿಯಲ್ಲಿ ನೂತನವಾಗಿ “ಝೆನ್ ಟೆಕ್ಸ್ ಟೈಲ್ಸ್” ಶುಭಾರಂಭಗೊ0ಡಿತು.

ಅಲಿ ತಂಙಳ್ ಕುಂಬೋಳ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕೆಐಸಿ ಪ್ರಾಂಶುಪಾಲ ಬಿ.ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಮಹಮ್ಮದ್ ಆಲಿ ಫೈಝಿ ಇರ್ಫಾನಿ, ವಿಟ್ಲ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ, ಪೆರಿಯಡ್ಕ ಜುಮಾ ಮಸೀದಿ ಖತೀಬು ಅಬೂಸಾಲಿ ಮುಸ್ಲಿಯಾರ್, ದುವಾಃ ಆಶೀರ್ವಚನ ನೀಡಿದರು.

ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ, ಮಾತನಾಡಿ ಉತ್ತಮ ರೀತಿಯಲ್ಲಿ ಬೆಳೆಯಲಿ, ಜನರಿಗೆ ಉತ್ತಮ ಸೇವೆ ನೀಡಲು ದೇವರು ಅನುಗ್ರಹಿಸಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಂ ಕೆ.ಬಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ, ವಿಟ್ಲ ವಾಣಿಜ್ಯ ಮತ್ತು ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ, ಎಂ ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಸುರಯ್ಯ ಖಾದರ್ ಹಾಜಿ, ಯು.ಎಂ ಅಬ್ಬಾಸ್ ಮಠ, ಲೂಯಿಸ್ ಮಸ್ಕರೇನಸ್, ಇ.ಕೆ ಸಿದ್ದೀಕ್ ಅಡ್ಡೂರು, ಎಂ.ಬಿ ನಝೀರ್, ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ಶಾಕೀರ್ ಅಳಕೆಮಜಲು, ಕಲಂದರ್ ಪರ್ತಿಪ್ಪಾಡಿ, ಮುಸ್ತಫಾ ಬಾಂಬಿಲ, ರಮಾನಾಥ ವಿಟ್ಲ, ರಝಾಕ್ ಕುಕ್ಕಾಜೆ, ಸಿದ್ದೀಕ್ ಉಚ್ಚಿಲ, ಉಬೈದ್ ವಿಟ್ಲ ಬಝಾರ್, ಮೊದಲಾದವರು ಭಾಗವಹಿಸಿದರು.

ಅತ್ಯುತ್ತಮ ಗುಣಮಟ್ಟ, ವಿಶಾಲ ಸಂಗ್ರಹ, ದೀರ್ಘ ಬಾಳಿಕೆ, ವಿವಿಧ ಹಾಗೂ ಟ್ರೆಂಡಿಂಗ್ ವಿನ್ಯಾಸದ ಪುರುಷರ, ಮಹಿಳೆಯರ, ಮಕ್ಕಳ ವಿವಿಧ ಬಟ್ಟೆಗಳು ಆಕರ್ಷಕ ದರದಲ್ಲಿ ಲಭ್ಯವಿದೆ.

ಶುಭಾರಂಭದ ಪ್ರಯುಕ್ತ ವಿಶೇಷ ಆಫರ್
ಶುಭಾರಂಭದ ಪ್ರಯುಕ್ತ ವಿಶೇಷ ಆಫರ್ ಇಡಲಾಗಿದ್ದು, ದಿನಾಂಕ 19-09-2021 ರಿಂದ 30-09-2021 ವರೆಗೆ 5 ಪ್ಲಾಝೋ ಪ್ಯಾಂಟ್ ಗೆ ರೂ. 399/-, 5 ಲೇಡಿಸ್ ಟಾಪ್ ಗೆ ರೂ. 499/-, 5 ಲೆಗ್ಗಿನ್ಸ್ ಗೆ ರೂ. 499/-, 5 ಲೇಡಿಸ್ ಶಾಲ್ ಗೆ ರೂ. 199/-,ರೂ ಆಫರ್ ಇಡಲಾಗಿದೆ.

ಸಂಸ್ಥೆಯ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ಸ್ಟೇಟಸ್ ಹಾಕಿದವರಿಗೂ ವಿಶೇಷ ಬಹುಮಾನ ಘೋಷಿಸಲಾಗಿದೆ. 50ಕ್ಕಿಂತ ಜನರು ಹೆಚ್ಚು ವೀಕ್ಷಿಸಿದ ಸ್ಟೇಟಸ್ ಸ್ಕ್ರೀನ್ ಶಾಟ್ ನ ಡ್ರಾ ಫಲಿತಾಂಶ ಸೆ. 26ರಂದು ನಡೆಯಲಿದ್ದು, ವಿಜೇತರಿಗೆ ರೂ. 3,313 ಬೆಳೆ ಬಾಳುವ ಫ್ಯಾಮಿಲಿ ಪ್ಯಾಕ್ ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲಕ ರಫೀಕ್ ಉಪ್ಪಿನಂಗಡಿ ತಿಳಿಸಿದ್ದಾರೆ.

- Advertisement -

Related news

error: Content is protected !!