Friday, June 27, 2025
spot_imgspot_img
spot_imgspot_img

ವಿಟ್ಲ: ಭಾರೀ ಮಳೆ ಹಿನ್ನಲೆ; ವಿಟ್ಲ ಪೊಲೀಸ್ ಠಾಣೆಯ ವಸತಿಗೃಹದ ತಡೆಗೋಡೆ ಮನೆಯಂಗಳಕ್ಕೆ ಕುಸಿತ..!

- Advertisement -
- Advertisement -

ವಿಟ್ಲ: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿಟ್ಲ ಪೊಲೀಸ್ ಠಾಣೆಯ ವಸತಿಗೃಹದ ತಡೆಗೋಡೆ ಮನೆಯಂಗಳಕ್ಕೆ ಕುಸಿದ ಘಟನೆ ವಿಟ್ಲದ ಪೊನ್ನೋಟ್ಟು ಎಂಬಲ್ಲಿ ನಡೆದಿದೆ.

ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಾಸ ಇರುವ ವಸತಿಗೃಹದ ಹಿಂಬದಿಯಲ್ಲಿದ್ದ ತಡೆಗೋಡೆ ಮತ್ತು ಗುಡ್ಡ ಒಮ್ಮೆಲೇ ಪಕ್ಕದಲ್ಲಿ ವಾಸ ಇರುವ ಆಯಿಷಾ ಪೊನ್ನೋಟ್ಟು ಅವರ ಮನೆಯ ಮೇಲೆ ಬಿದ್ದಿದೆ. ಇದರಿಂದ ಮನೆಗೆ ಹಾನಿಯಾಗಿದೆ. ಇನ್ನಷ್ಟು ಮಣ್ಣುಗಳು ಕುಸಿಯುವ ಸಾಧ್ಯತೆ ಕಂಡು ಬಂದಿದೆ.

ಪೊಲೀಸ್ ವಸತಿಗೃಹದ ಆವರಣದಲ್ಲಿ ಮುಟ್ಟುಗೋಲು ಹಾಕಲಾದ ವಾಹನಗಳನ್ನು ನಿಲ್ಲಿಸಲಾಗಿದ್ದು, ಅವುಗಳು ಕೂಡಾ ಮನೆ ಮೇಲೆ ಬೀಳುವ ಸಾಧ್ಯತೆಗಳಿವೆ. ಈ ಬಗ್ಗೆ ಈ ಹಿಂದೆಯೇ ಪಟ್ಟಣ ಪಂಚಾಯತ್ ಗೆ ಆಯಿಷಾ ಅವರು ಮನವಿ ಸಲ್ಲಿಸಿದ್ದರು. ಆದರೆ ಯಾರೂ ಸ್ಪಂದನೆ ನೀಡಿರುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

- Advertisement -

Related news

error: Content is protected !!