- Advertisement -
- Advertisement -





ವಿಟ್ಲ: ಮಂಗಳೂರು ಎಂ ಆರ್ ಪಿ ಎಲ್ ಒ ಎನ್ ಜಿ ಸಿ ವತಿಯಿಂದ ವಿಟ್ಲ ದ ವಿಟ್ಠಲ ಎಜುಕೇಶನ್ ಸೊಸೈಟಿ ಪ್ರೌಢಶಾಲಾ ವಿಭಾಗದ ಎನ್ ಸಿ ಸಿ, ಸ್ಕೌಟ್ ಮತ್ತು ಗೈಡ್ ಹಾಗೂ ಇಕೋ ಕ್ಲಬ್ ವಿದ್ಯಾರ್ಥಿಗಳ ಸಂಯೋಗದಿಂದ ಶಾಲಾ ವಠಾರದಲ್ಲಿ ಹಣ್ಣುಗಳ ಗಿಡಗಳನ್ನು ನೆಡಲಾಯಿತು.





ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಎಂ ಆರ್ ಪಿ ಎಲ್ ಪ್ರತಿನಿಧಿಗಳಾಗಿ ಬಾಲನಾರಾಯಣ ಮತ್ತು ಶಿವಪ್ರಸಾದ್, ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿಯ ಸಂಚಾಲಕ ರಾಧಾಕೃಷ್ಣ ನಾಯಕ್, ಸದಸ್ಯರಾದ ನಿತ್ಯಾನಂದ ನಾಯಕ್, ಸುದರ್ಶನ ಪಡಿಯಾರ್, ಉಪ ಪ್ರಾಂಶುಪಾಲ ಕಿರಣ್ ಕುಮಾರ್, ಅಧ್ಯಾಪಕರುಗಳಾದ ಮೋಹನ್, ರಾಜಶೇಖರ, ವಾಣಿ, ವೀಣಾ, ಶ್ರೀಹರಿ, ಎನ್ ಸಿ ಸಿ ಆಫಿಸರ್ ಶ್ರೀನಿವಾಸ್, ಕೇಡೆಟ್ ಗಳು, ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
- Advertisement -








