Friday, June 19, 2026
spot_imgspot_img
spot_imgspot_img

ವಿಟ್ಲ: ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ 2026-27ನೇ ಸಾಲಿನ ವಿದ್ಯಾರ್ಥಿಗಳ ಚುನಾವಣೆ

- Advertisement -
- Advertisement -

ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಕ್ಲಾರಿಸ್ ಜೋಯ್ಸಿ ಲೋಬೋ ಹಾಗೂ ಉಪನಾಯಕಿಯಾಗಿ ಅಲ್ವಿಶಾ ಪೈಸ್ ಆಯ್ಕೆ

ವಿಟ್ಲ: ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ 2026-27ನೇ ಸಾಲಿನ ವಿದ್ಯಾರ್ಥಿಗಳ ಚುನಾವಣೆಯಲ್ಲಿ ವಿದ್ಯಾರ್ಥಿ ಮಂಡಲಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಕ್ಲಾರಿಸ್ ಜೋಯ್ಸಿ ಲೋಬೋ ಹಾಗೂ ಉಪವಿದ್ಯಾರ್ಥಿ ನಾಯಕಿಯಾಗಿ ಅಲ್ವಿಶಾ ಪೈಸ್ ಆಯ್ಕೆಯಾಗಿದ್ದಾರೆ.

ಶಿಕ್ಷಣ ಮಂತ್ರಿಯಾಗಿ ಕಾಶ್ವಿ ಎಸ್. ಶೆಟ್ಟಿ, ಉಪ ಮಂತ್ರಿಯಾಗಿ ಧನ್ವಿ, ಸಾಂಸ್ಕೃತಿಕ ಮಂತ್ರಿಯಾಗಿ ನಿರ್ವಿ ದಲ್ಕಾಜೆ, ಉಪ ಮಂತ್ರಿಯಾಗಿ ಪ್ರಿಷಾ, ಶಿಸ್ತು ಮಂತ್ರಿಯಾಗಿ ವಿದಿಶಾ, ಉಪ ಮಂತ್ರಿಯಾಗಿ ಮೋಹಿಕ್ ವಿ.ಎಚ್. ಮೋಯ್ಲಿ, ಆರೋಗ್ಯ ಮಂತ್ರಿಯಾಗಿ ಕ್ಲೇರಾ ಪ್ರೆಸ್ಮಾ ಪಿಂಟೊ, ಉಪ ಮಂತ್ರಿಯಾಗಿ ಎಫ್. ಇಡಾ ಸೈಹಾ, ಕ್ರೀಡಾ ಮಂತ್ರಿಯಾಗಿ ವಿನೋಲ್ ಶಾನ್ ಪೈಸ್ ಹಾಗೂ ಉಪ ಮಂತ್ರಿಯಾಗಿ ಜಿಷ್ಣು ಅಮೀನ್ ಆಯ್ಕೆಯಾಗಿದ್ದಾರೆ.

ರೆನಿಷಾ ಪೈಸ್ ಸಭಾಧ್ಯಕ್ಷೆಯಾಗಿ, ಫಾತಿಮತ್ ಶೈಫಾ ವಿರೋಧ ಪಕ್ಷದ ನಾಯಕಿಯಾಗಿ ಹಾಗೂ ಮೋಹಕ್ ಡಿ.ಆರ್. ವಿರೋಧ ಪಕ್ಷದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!