ವಿಟ್ಲ ಸರಕಾರಿ ಕಾಲೇಜಿನಲ್ಲಿ ಡಿಗ್ರಿ ವಿದ್ಯಾರ್ಥಿಗಳಿಗೊಂದು ಗರಿ:






ವಿಟ್ಲ: ಕರ್ನಾಟಕ- ಕೇರಳದ ಆಯಕಟ್ಟಿನ ವಾಣಿಜ್ಯ ಕೇಂದ್ರವಾದ ವಿಟ್ಲದ ಪ್ರಶಾಂತ ವಾತಾವರಣದಲ್ಲಿರುವ ಸ.ಪ್ರ.ದ.ಕಾಲೇಜು; ಎರಡು ರಾಜ್ಯಗಳ ರೈತಾಪಿ ಸಮುದಾಯದ ವಿದ್ಯಾರ್ಥಿಗಳ ಕನಸು ಸಾಕಾರಗೊಳಿಸುತ್ತಿದೆ. 2025-26ನೇ ಶೈಕ್ಷಣಿಕ ಸಾಲಿನ ಪದವಿ ಪ್ರವೇಶಾತಿ ಆರಂಭಗೊಂಡಿರುತ್ತದೆ.
ಬಿ.ಯಸ್.ಡಬ್ಲ್ಯು , ಬಿಎ, ಬಿ.ಕಾಂ ಮತ್ತು ಎಂ.ಎಸ್‌ಡಬ್ಲ್ಯು ಸ್ನಾತಕೋತ್ತರ ಕೊರ್ಸುಗಳು ಇಲ್ಲಿ ಲಭ್ಯವಿದ್ದು ಪೂರ್ಣ ಪ್ರಮಾಣದ ಅರ್ಹ ಮತ್ತು ಅನುಭವ ಪ್ರಾಧ್ಯಪಕ ವೃಂದವಿದೆ. 02 ಸುಸಜ್ಜಿತ ಸಭಾಭವನಗಳು, ಉತ್ತಮ ಗ್ರಂಥಾಲಯ ಸೌಲಭ್ಯದೊಂದಿಗೆ ಕಾಲೇಜಿನ ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ದರ ಕಡಿತ ಬಿಸಿಯೂಟವಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ನೀಡಲಾಗುವುದೆಂದು ಪ್ರಾಂಶುಪಾಲ ಪ್ರೊ.ಪದ್ಮನಾಭ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಬಿಎ ವಿದ್ಯಾರ್ಥಿನಿ ಖದೀಜಾ ರಾಸ್ಮಿನ್ ವಿಶ್ವವಿದ್ಯಾನಿಲಯ ಮಟ್ಟದ ಪರೀಕ್ಷೆಯಲ್ಲಿ 9ನೇ ರಾಂಕ್ ಗಳಿಸಿ ಐತಿಹಾಸಿಕ ಸಾಧನೆ ಮಾಡಿರುವುದು ಉಲ್ಲೇಖನೀಯ. ಹೆಣ್ಣು ಮಕ್ಕಳಿಗೆ ಭೋದನ ಶುಲ್ಕ ಮರು ಪಾವತಿಯಾಗುವುದರ ಜೊತೆಗೆ ಎಲ್ಲ ಖಾಸಗಿ ಹಾಗೂ ಸರ್ಕಾರಿ ವಿದ್ಯಾರ್ಥಿ ವೇತನಗಳು ಎಲ್ಲಾ ವಿದ್ಯಾರ್ಥಿಗಳಿಗೂ ಲಭ್ಯ. ವಿದ್ಯಾಲಯದ ವಿಶ್ರಾಂತಿ ಕೊಠಡಿ ಸೌಲಭ್ಯ, ಕಂಪ್ಯೂಟರ್, ಯಲ್.ಸಿ.ಡಿ ಪ್ರೊಜೆಕ್ಟರ್, ಪವರ್ ಪಾಯಿಂಟ್ ನೊಂದಿಗೆ ವಿವಿಧ ಸಂವಹನ, ಕೌಶಲ್ಯಾಭಿವೃದ್ಧಿ ಸಂವಹನ ತರಬೇತಿಗಳು ನಡೆಯುತ್ತಿರುತ್ತವೆ.
ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ವಿಶಾಲ ಕ್ರೀಡಾಂಗಣ, ಮಲ್ಟಿ ಜಿಮ್ ವ್ಯವಸ್ಥೆ ಇದೆ. ಪಠ್ಯ_ಸಹಪಠ್ಯದೊಂದಿಗೆ ಸರ್ವಾಂಗಾಣ ಪ್ರಗತಿಗೆ ಅವಕಾಶ ಕಲ್ಪಿಸಲಾಗಿದೆ. ಎನ್‌ಎಸ್‌ಎಸ್, ರೆಡ್ ಕ್ರಾಸ್, ರೇಂಜರ್ ಮತ್ತು ರೋವರ್ಸ್ ಘಟಕಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಉದ್ಯೋಗ ಮೇಳಗಳು ಕಾಲಕಾಲಕ್ಕೆ ನಡೆಯುತ್ತಿರುತ್ತವೆ. ವಿಟ್ಲ ಆಸುಪಾಸಿನ ಉಭಯ ಜಿಲ್ಲೆಗಳ ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾಕಾಂಕ್ಷಿ ವಿದ್ಯಾರ್ಥಿಗಳಿಗೆ ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಮಟ್ಟದ ವ್ಯಕ್ತಿತ್ವ ವಿಕಸನಕ್ಕೆ ಸರ್ಕಾರಿ ಕಾಲೇಜು ರಹದಾರಿ ಕಲ್ಪಿಸಿದೆ.