




ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯು ಜ.14 ರಿಂದ ಜ.22 ರ ವರೆಗೆ ನಡೆಯಲಿದ್ದು, ದಿನಾಂಕ 14-01-2026 ನೇ ಬುಧವಾರ ಬೆಳಿಗ್ಗೆ 10 ಕ್ಕೆ ಧ್ವಜಾರೋಹಣ ನಡೆಯಲಿದೆ.
ಸಂಜೆ 6 ಗಂಟೆಗೆ ಅರಸು ಮುಂಡಾಲ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನ ಬಳಿಕ ರಾತ್ರಿ 8.30ಕ್ಕೆ ಲಕ್ಷದೀಪೋತ್ಸವ, ಉತ್ಸವ ಬಲಿ, ಕಟ್ಟೆ ಪೂಜೆಯ ಬಳಿಕ ಬಟ್ಟಲು ಕಾಣಿಕೆ ನಡೆಯಲಿದೆ.
15-01-2026ನೇ ಗುರುವಾರ ಸಂಜೆ 7ಕ್ಕೆ ನಿತ್ಯೋತ್ಸವ ನಡೆಯಲಿದೆ. ದಿನಾಂಕ 16-01-2026ನೇ ಶುಕ್ರವಾರ ಸಂಜೆ 7ಕ್ಕೆ ನಿತ್ಯೋತ್ಸವ ನಡೆಯಲಿದೆ. ದಿನಾಂಕ 17-01-2026ನೇ ಶನಿವಾರ ಸಂಜೆ 7ಕ್ಕೆ ನಿತ್ಯೋತ್ಸವ ನಡೆಯಲಿದೆ.
ದಿನಾಂಕ 18-01-2026ನೇ ಆದಿತ್ಯವಾರದಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಪಂಚಲಿಂಗೇಶ್ವರ ದೇವರ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ರುದ್ರಯಾಗ ನಡೆಯಲಿದೆ.ರಾತ್ರಿ ಗಂಟೆ 8.30 ಕ್ಕೆ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಬರುವುದು. ನಂತರ ರಾತ್ರಿ ಗಂಟೆ 9 ಕ್ಕೆ ಬಯ್ಯದ ಉತ್ಸವ ಬಲಿ ಪ್ರಾರಂಭವಾಗುವುದು.
ದಿನಾಂಕ 19-01-2026ನೇ ಸೋಮವಾರ ಗಂಟೆ 9.30ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ರಾತ್ರಿ ಗಂಟೆ 8 ಕ್ಕೆ ನಡುದೀಪೋತ್ಸವ ನಂತರ ತೆಪ್ಪೋತ್ಸವ ನಡೆಯಲಿದೆ.
ದಿನಾಂಕ 20-01-2026ನೇ ಪ್ರಾತಃಕಾಲ ಗಂಟೆ 5ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಂತರ ರಾತ್ರಿ ಗಂಟೆ 7.30ಕ್ಕೆ ಉತ್ಸವದ ನಂತರ ಹೂತೇರು ನಡೆಯಲಿದೆ.
ದಿನಾಂಕ 21-01-2026ನೇ ಬುಧವಾರ ಬೆಳಿಗ್ಗೆ 9.30ಕ್ಕೆ ದರ್ಶನ ಬಲಿ, ರಾಜಾಂಗಣದ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಸಂಜೆ 8.30ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನ ರಾತ್ರಿ 9 ಗಂಟೆಗೆ ಮಹಾರಥೋತ್ಸವ ನಂತರ ಬೀದಿ ಮೆರವಣಿಗೆ ಹಾಗೂ ಶಯನೋತ್ಸವ ನಡೆಯಲಿದೆ.
ದಿನಾಂಕ 22-01-2026ನೇ ಗುರುವಾರ ಬೆಳಿಗ್ಗೆ 8.30ಕ್ಕೆ ಕವಟೋದ್ಘಾಟನೆ, ಮಹಾಪೂಜೆ, ಕಾಲಾವಧಿ ಬಟ್ಟಲು ಕಾಣಿಕೆ ನಂತರ ತುಲಾಭಾರ ಸೇವೆ ನಡೆಯಲಿದೆ.
ರಾತ್ರಿ 7.30ಕ್ಕೆ ಓಕುಳಿಕಟ್ಟೆಯಲ್ಲಿ ಕಟ್ಟೆಪೂಜೆಯ ನಂತರ ಶ್ರೀ ದೇವರಿಗೆ ಅಷ್ಟವಧಾನ ಸೇವೆ ನಂತರ ಅವಭ್ರತ ಸ್ನಾನಕ್ಕೆ ಕೊಡಂಗಾಯಿಗೆ ಸವಾರಿ, ಧ್ವಜಾವರೋಹಣ, ಸಂಪ್ರೋಕ್ಷಣೆ ನಡೆಯಲಿದೆ.
ದಿನಾಂಕ 24-01-2026 ನೇ ಶನಿವಾರ ಮಧ್ಯಾಹ್ನ ಗಂಟೆ 2 ಕ್ಕೆ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ, ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ ನಡೆಯಲಿದೆ.
ದಿನಾಂಕ 25-01-2026ನೇ ಆದಿತ್ಯವಾರ ಮಧ್ಯಾಹ್ನ2 ಗಂಟೆಗೆ ಅರಮನೆಯಲ್ಲಿ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ಬಳಿಕ ಕೇಪಿಗೆ ಭಂಡಾರ ಹೊರಡುವುದು.
ಈ ಸಂಭ್ರಮದ ಜಾತ್ರೋತ್ಸವದಲ್ಲಿ ಎಲ್ಲಾ ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








