Sunday, September 6, 2026
spot_imgspot_img
spot_imgspot_img

ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.) 2025-26 ನೇ ಸಾಲಿನ ವಾರ್ಷಿಕ ಮಹಾಸಭೆ

- Advertisement -
- Advertisement -

ಸಂಘವು ರೂ 238.99 ಕೋಟಿ ವ್ಯವಹಾರ ಮಾಡಿ 1,47,14,602.06 ಲಾಭ ಗಳಿಸಿದೆ- ಅಧ್ಯಕ್ಷ ನರ್ಸಪ್ಪ ಪೂಜಾರಿ ಎನ್

ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.) 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ನರ್ಸಪ್ಪ ಪೂಜಾರಿ ಎನ್. ಅವರ ಅಧ್ಯಕ್ಷತೆಯಲ್ಲಿ ಸೆ.6ರಂದು ಆದಿತ್ಯವಾರ ಬೆಳಗ್ಗೆ 11 ಗಂಟೆಗೆ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆಯಿತು. ಸಂಘದ ಹಿರಿಯ ಸದಸ್ಯರಾದ ಸೇರಾಜೆ ಸುಬ್ರಹ್ಮಣ್ಯ ಭಟ್, ಭೋಜಪ್ಪ ಗೌಡ ಮಾಡತ್ತಾರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಎನ್. ಮಾತನಾಡಿ, ದಿನಾಂಕ 31-03-2026ಕ್ಕೆ 5511 “ಎ” ತರಗತಿ ಸದಸ್ಯರಿದ್ದು, 3.90,03,274 ರೂ. ಪಾಲು ಬಂಡವಾಳ ಹೊಂದಿದೆ. 39.60ಕೋಟಿ ಠೇವಣಾತಿಯನ್ನು ಹೊಂದಿ ಶೇ.9.76 ಹೆಚ್ಚಳವಾಗಿದೆ.ಸದಸ್ಯರ, ಠೇವಣಿದಾರರ ಮತ್ತು ಗ್ರಾಹಕರ ಸಹಕಾರದಿಂದ ಸಂಘವು ಸತತ ಲಾಭದಲ್ಲಿ ನಡೆಯುತ್ತಿದೆ. 2025-26ನೇ ಸಾಲಿನಲ್ಲಿ ಸಂಘವು ರೂ 238.99 ಕೋಟಿ ವ್ಯವಹಾರ ಮಾಡಿ ಎಲ್ಲಾ ಖರ್ಚುಗಳನ್ನು ಕಳೆದು ರೂ. 1,47,14,602.06 ಲಾಭ ಗಳಿಸಿದ್ದು ವರದಿ ಸಾಲಿನಲ್ಲಿ ಸಂಘವನ್ನು “ಎ” ತರಗತಿಯಲ್ಲಿ ವರ್ಗೀಕರಿಸಲಾಗಿರುತ್ತದೆ ಎಂದರು.

ಎಸ್‌ಎಸ್‌ಎಲ್‌ಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ 32 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ 25 ಸಂಘದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು. 2025-26 ನೇ ಸಾಲಿನಲ್ಲಿ ಅಗಲಿದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರ ಬಿ. ಲೆಕ್ಕಪತ್ರ ಹಾಗೂ ವಾರ್ಷಿಕ ವರದಿ ಮಂಡಿಸಿದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರು ಶ್ರೀಮತಿ ಮಂಜುಳಾ , ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಶೋಭಾ.ಕೆ., ನಿರ್ದೇಶಕರುಗಳಾದ ಉದಯಕುಮಾರ್‍ ಯನ್ , ರಾಘವೇಂದ್ರ ಪೈ ಎ, ದಿನೇಶ ಕೆ, ಶ್ರೀಮತಿ ಸಂಧ್ಯಾ ಮೋಹನ, ವಾಸು ಸಿ ಹೆಚ್, ಹರೀಶ್ ನಾಯ್ಕ, ತೀರ್ಥರಾಮ, ಯೋಗೀಶ್ ಹೆಚ್. ಹಾಗೂ ಸಿಬ್ಬಂದಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಕುಮಾರಿ ವಿದ್ಯುಲ್ಲತಾ ಹಾಗೂ ಧರಿತ್ರಿ ಪ್ರಾರ್ಥಿಸಿ, ಸದಾನಂದ ಗೌಡ ಸೇರಾಜೆ ಸ್ವಾಗತಿಸಿದರು. ಮಹಾಬಲೇಶ್ವರ ಭಟ್ ಎ ವಂದಿಸಿದರು, ಮೋಹನದಾಸ್ ಉಕ್ಕುಡ ನಿರೂಪಿಸಿದರು.

- Advertisement -

Related news

error: Content is protected !!