Friday, July 11, 2025
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸಿ ಶಾಲಾ ಆಡಳಿತ ಸೌಧ ಶಿಲಾನ್ಯಾಸ ಕಾರ್ಯಕ್ರಮ

- Advertisement -
- Advertisement -

ವಿಟ್ಲ ಬಸವನಗುಡಿಯ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಆಡಳಿತ ಸೌಧಕ್ಕೆ ನಿವೃತ್ತ ಪ್ರಾಂಶುಪಾಲ ಮತ್ತು ಪುರೋಹಿತರಾದ ಬಟ್ರುಪ್ಪಾಡಿ ರಾಧಾಕೃಷ್ಣ ಭಟ್ ರವರ ಪೌರೋಹಿತ್ಯದಲ್ಲಿ ಸಂಸ್ಥೆಯ ಅಧ್ಯಕ್ಷ ಎಲ್.ಎನ್. ಕೂಡೂರು ರವರು ಶಿಲಾನ್ಯಾಸ ಗೈದು, ವಿದ್ಯಾರ್ಥಿಗಳ ಮತ್ತು ಪೋಷಕರಿಗೆ ಉತ್ತಮ ಸೇವೆಯನ್ನು ನೀಡುವ ದೆಸೆಯಿಂದ ನೂತನ ಕಚೇರಿ, ವಾಚನಾಲಯ, ಗಣಕಶಾಸ್ತ್ರ ವಿಭಾಗ ಹಾಗೂ ಸಂಸ್ಥೆಯ ಆಡಳಿತ ನಿರ್ದೇಶಕರ ಕಚೇರಿಗಳು ಕ್ಷಿಪ್ರಗತಿಯಲ್ಲಿ ರೂಪುಗೊಳ್ಳಲಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಶ್ರೀಧರ ಶೆಟ್ಟಿ, ಕಾರ್ಯದರ್ಶಿ ಮೋಹನ ಎ, ಜತೆಕಾರ್ಯದರ್ಶಿ ಪ್ರಕಾಶ್ ಕುಕ್ಕಿಲ, ನಿರ್ದೇಶಕ ಹಸನ್ ವಿಟ್ಲ, ಜೇಸಿ ಅಧ್ಯಕ್ಷ ಹಾಗೂ ಕಟ್ಟಡ ಇಂಜಿನಿಯರ್ ಸಂತೋಷ್ ಕುಮಾರ್ ಪೆಲತಡ್ಕ, ಆಡಳಿತಾಧಿಕಾರಿ ರಾಧಾಕೃಷ್ಣ ಎ, ಪ್ರಾಂಶುಪಾಲ ಜಯರಾಮ ರೈ, ಉಪಾಪ್ರಾಂಶುಪಾಲೆ ಜ್ಯೋತಿ ಶೆಣೈ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜೇಸಿ ಶಾಲಾ ಮೂಲ ಸೌಕರ್ಯಗಳ ಬೆಳವಣಿಗೆಗೆ ಇದು ಪೂರಕವಾಗಲಿದೆ.

- Advertisement -

Related news

error: Content is protected !!