


ವಿಟ್ಲ: ವಿಠಲ ಎಜುಕೇಶನ್ ಸೊಸೈಟಿ ಇದರ ಪದವಿ ಪೂರ್ವ ಕಾಲೇಜಿನಲ್ಲಿ ” ಜೀವನದಲ್ಲಿ ಶಿಕ್ಷಣದ ಮಹತ್ವ” ವಿಶೇಷ ಉಪನ್ಯಾಸ ಕಾರ್ಯಕ್ರಮ, 2024 25 ನೇ ಸಾಲಿನ ಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಗೌರವ ಸಮರ್ಪಣೆ ಹಾಗೂ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಸಭಾಧ್ಯಕ್ಷತೆ ವಹಿಸಿ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರೋಟರಿ ಜಿಲ್ಲಾ ಮಾಜಿ ಉಪ ಗವರ್ನರ್ ರಾಘವೇಂದ್ರ ಭಟ್ ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಸೊಸೈಟಿ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಮತ್ತು ಕೋಶಾಧಿಕಾರಿ ಬಾಬು ಕೊಪ್ಪಳ ಭಾಗವಹಿಸಿದ್ದರು. ಸದಸ್ಯರು ಗಳಾದ ನಿತ್ಯಾನಂದ ನಾಯಕ್ ಪದ್ಮಯ್ಯ ಗೌಡ ಮತ್ತು ಸದಾಶಿವ ಬನ ಉಪಸ್ಥಿತರಿದ್ದರು.
ಕಾಲೇಜು ಪ್ರಾಂಸುಪಾಲರು ಆದರ್ಶ ಚೊಕ್ಕಾಡಿ ಸ್ವಾಗತಿಸಿ, ಉಪನ್ಯಾಸ ಕ ಉದಯ್ ವಂದಿಸಿದರು. ಉಪನ್ಯಾಸಕಿ ಸವಿತ ನಿರೂಪಿಸಿದರು. ಉಪನ್ಯಾಸಕರಾದ ಜಲಜಾಕ್ಷಿ, ಪ್ರಕಾಶ್ ನಾಯಕ್, ಚಂದ್ರಕಲಾ, ರೂಪಶ್ರೀ ಸಹಕರಿಸಿದರು.