Monday, April 29, 2024
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

- Advertisement -G L Acharya panikkar
- Advertisement -

ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಪೋಷಕರ ಸಭೆ ಹಾಗೂ ಶಾಲಾ ಸಭಾಂಗಣ “ಜೇಸಿ ಪೆವಿಲಿಯನ್”ನ ನೂತನ ವೇದಿಕೆಯ ಉದ್ಘಾಟನೆ ಕಾರ್ಯಕ್ರಮ ನೆರವೇರಿತು. ಶಿಶುವಿಹಾರ, ನರ್ಸರಿ, ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಾಗಿ ಸಭೆಯನ್ನು ನಡೆಸಲಾಯಿತು.

ಶಿಶುವಿಹಾರ, ನರ್ಸರಿ ಮತ್ತು ಪೂರ್ವ ಪ್ರಾಥಮಿಕ ವಿಭಾಗದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮನಶಾಸ್ತ್ರಜ್ಞರಾದ ಅಕ್ಷತಾ ರವರು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರದ ಬಗ್ಗೆ ವಿವರಿಸಿದ್ದರು. ಲೀಡ್ ಶೈಕ್ಷಣಿಕ ಸಲಹೆಗಾರರಾದ ಮಹಮ್ಮದ್ ನಾಸಿರ್ ಪೋಷಕರಿಂದ ಬಂದ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.


ಪ್ರಾಥಮಿಕ ವಿಭಾಗದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರವಚನಕಾರ, ಆಧ್ಯಾತ್ಮಿಕ ಚಿಂತಕ ಕಿರಣ್ ಕುಮಾರ್ ಪಡು ಪಣಂಬೂರುರವರು ಮಾತನಾಡಿ ಮಗು ಭವಿಷ್ಯದಲ್ಲಿ ಏನು ಆಗಬೇಕು ಎಂಬ ತೀರ್ಮಾನ ಪೋಷಕರ ಕೈಯಲ್ಲಿದೆ, ಮಕ್ಕಳು ಧರ್ಮದ ಮಾರ್ಗದಲ್ಲಿ ಮುಂದುವರೆದು ಜೀವನ ಯಶಸ್ವಿಯಾಗುವಂತೆ ಪ್ರೇರೇಪಿಸಿ ಎಂದು ಪೋಷಕರಿಗೆ ಸಲಹೆ ನೀಡಿದರು.

ಪ್ರೌಢಶಾಲಾ ವಿದ್ಯಾರ್ಥಿಗಳ ಸಭೆಯಲ್ಲಿ ಸಂನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕಿರಣ್ ಕುಮಾರ್ ಪಡು ಪಣಂಬೂರುರವರು ತಮ್ಮ ಮಕ್ಕಳು ಹದಿಹರೆಯದವರಾದ್ದರಿಂದ ಪೋಷಕರು ಅತ್ಯಂತ ತಾಳ್ಮೆ ಹೊಂದಿಸಿಕೊಂಡು ತಮ್ಮ ಮಕ್ಕಳೊಂದಿಗೆ ವ್ಯವಹರಿಸಬೇಕು, ವಿವೇಕವಿಲ್ಲದ ವಿದ್ಯೆ ವಿನಾಶಕ್ಕೆ ಕಾರಣ ಆದುದರಿಂದ ವಿದ್ಯೆ ಜೊತೆಗೆ ವಿವೇಕವನ್ನು ಬೆಳೆಸಿ, ಶುದ್ಧ ಮನಸ್ಸು ಮತ್ತು ಜ್ಞಾನವನ್ನು ಗಟ್ಟಿಗೊಳಿಸುತ್ತಾ ಹೋಗುವಂತೆ ದಾರಿ ತೋರಬೇಕು ಎಂದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್ ಎನ್ ಕೂಡೂರುರವರು ಹೆತ್ತವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಉತ್ತಮ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು, ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ರೂಡಿಸಿಕೊಂಡು, ಪ್ರತಿ ಮಗುವಿನ ಬಗ್ಗೆ ಕಾಳಜಿ ವಹಿಸುವುದಾಗಿ ಸಂತಸ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಶ್ರೀಧರ್ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರಕಾಶ್, ಹಿರಿಯ ನಿರ್ದೇಶಕ ಮೋನಪ್ಪ ಶೆಟ್ಟಿ, ಆಡಳಿತಾಧಿಕಾರಿ ರಾಧಾಕೃಷ್ಣ ಎ ಮತ್ತು ಉಪಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು.

ಶಿಕ್ಷಕಿ ರಶ್ಮಿ ಕೆ ಎನ್., ಶಿಕ್ಷಕಿ ಪ್ರಶಾಂತಿ, ಸಹಶಿಕ್ಷಕಿ ತೇಜಸ್ವಿನಿ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಜಯರಾಮ ರೈ ಸ್ವಾಗತಿಸಿ, ಶಿಕ್ಷಕಿಯರಾದ ಶಶಿಕಲಾ, ಸರಸ್ವತಿ ಪ್ರಾಸ್ತವಿಕವಾಗಿ ಮಾತನಾಡಿದರು.ಶಿಕ್ಷಕಿ ವಿದ್ಯಾಶ್ರೀ ವಂದಿಸಿದರು. ಶಿಕ್ಷಕಿಯರಾದ ದೇವಿಕಾ ಪ್ರವೀಣ್, ರಶ್ಮಿ ಕೆ, ಸೀಮಾ ಸಲ್ದಾನ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ರೂಪ, ಪವಿತ್ರ, ದೀಪ್ತಿ ಮತ್ತು ತುಳಸಿ ಮೂರು ವಿಭಾಗಗಳಲ್ಲಿ ಪೋಷಕರಿಗೆ ಸೂಕ್ತ ಸಲಹೆ ಸೂಚನೆಗಳನ್ನು, ವಿದ್ಯಾರ್ಥಿಗಳು ಶಾಲೆಯಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿವರಿಸಿದರು. ಲಘು ಉಪಹಾರದ ವ್ಯವಸ್ಥೆಯಲ್ಲಿ ಹಿರಿಯ ಶಿಕ್ಷಕಿ ಐಡಾ ಲಸ್ರದೋ, ಪಾಕಪ್ರವೀಣ ವಿಜಯ ಭಟ್ ಹಾಗೂ ಬಳಗದವರು ಸಹಕರಿಸಿದರು .

- Advertisement -

Related news

error: Content is protected !!