Tuesday, July 21, 2026
spot_imgspot_img
spot_imgspot_img

ವಿಟ್ಲ: ವಿಠಲ ಪ್ರೌಢಶಾಲೆಯಲ್ಲಿ ಉಚಿತ ಶಿಕ್ಷಣ ಅಭಿಯಾನ ಉದ್ಘಾಟನೆ ಮತ್ತು ಜೆರಾಕ್ಸ್ ಯಂತ್ರದ ಹಸ್ತಾಂತರ

- Advertisement -
- Advertisement -

ವಿಟ್ಲ: ಜೀವನ ರೂಪಿಸಿದ ಶಾಲೆಯನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ಅಲ್ಲಿ ಕಲಿತ ವಿದ್ಯಾರ್ಥಿಗಳಿಗಿದೆ. ಬಡವರಿಗೆ ವಿದ್ಯಾಬ್ಯಾಸ ನೀಡಿದಾಗ ಅವರ ಕಾಲ ಮೇಲೆ ಅವರು ನಿಲ್ಲಲು ಸಾಧ್ಯವಾಗುತ್ತದೆ ಎಂದು ಹಿರಿಯ ವಿದ್ಯಾರ್ಥಿ ಡಾ. ವಿ.ಕೆ ಹೆಗ್ಡೆ ಹೇಳಿದರು.

ಅವರು ವಿಠಲ ವಿದ್ಯಾ ಸಂಘದ ವಿಠಲ ಪ್ರೌಢಶಾಲೆ ವಿದ್ಯಾಪೋಷಕ ಸಮಿತಿಯ ಉಚಿತ ಶಿಕ್ಷಣ ಅಭಿಯಾನ ಉದ್ಘಾಟನೆ ಮತ್ತು ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಕೊಡುಗೆಯಾಗಿ ನೀಡಿದ ಜೆರಾಕ್ಸ್ ಯಂತ್ರದ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಠಲ ಪ್ರೌಢಶಾಲೆ ವಿದ್ಯಾಪೋಷಕ ಸಮಿತಿ ಅಧ್ಯಕ್ಷ ಬಾಬು ಕೆ. ವಿ. ಮಾತನಾಡಿ ಶಿಕ್ಷಣ ನೀತಿಗಳಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳನ್ನು ಕನ್ನಡ ಮಾಧ್ಯಮದತ್ತ ಆಕರ್ಷಿಸುವ ನಿಟ್ಟಿನಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ವಿಠಲ ವಿದ್ಯಾ ಸಂಘದ ಗೌರವಾಧ್ಯಕ್ಷ ಬಂಗಾರು ಅರಸರು, ಸಂಚಾಲಕ ಎಲ್ ಎನ್ ಕೂಡೂರು, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಉಪಾಧ್ಯಕ್ಷ ಅಲ್ಫಾನ್ಸ್ ಸಿಲ್ವೆಸ್ಟರ್ ಮಸ್ಕರೇಂಞಸ್, ಹಿರಿಯ ವಿದ್ಯಾರ್ಥಿ ಡಾ. ವಿ.ಕೆ ಹೆಗ್ಡೆ, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಉಪಾಧ್ಯಕ್ಷ ವಿ.ಎಸ್ ಇಬ್ರಾಹಿಂ, ಕಾರ್ಯದರ್ಶಿ ಕ್ಲಿಪರ್ಡ್ ವೇಗಸ್, ಕೋಶಾಧಿಕಾರಿ ಆ್ಯಂಟನಿ ಲೋಬೋ, ವಿಠಲ ವಿದ್ಯಾ ಸಂಘದ ಸದಸ್ಯರಾದ ನಿತ್ಯಾನಂದ ನಾಯಕ್, ಪದ್ಮಯ್ಯ ಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಉಪಸ್ಥಿತರಿದ್ದರು.

ಲೀಲಾ ಪ್ರಾರ್ಥಿಸಿದರು, ಕಿರಣ್ ಕುಮಾರ್ ಬ್ರಹ್ಮಾವರ ಸ್ವಾಗತಿಸಿ, ಶಂಕರ್ ನಾರಾಯಣ ಪ್ರಸಾದ್ ಪ್ರಸ್ತಾವನೆ ಮಾಡಿದರು, ಶ್ರೀಹರಿ ಕಾರ್ಯಕ್ರಮವನ್ನು ನಿರೂಪಿಸಿದರು, ರಮೇಶ್ ಬಿ.ಕೆ ವಂದಿಸಿದರು.

- Advertisement -

Related news

error: Content is protected !!