- Advertisement -
- Advertisement -


ಅಧ್ಯಕ್ಷರಾಗಿ ವಿಟ್ಲ ಪಟ್ಟಣ ಪಂಚಾಯತ್ ನ ಸದಸ್ಯ ಹರೀಶ್ ಪೂಜಾರಿ ಸಿ.ಎಚ್ ನೇಮಕ
ವಿಟ್ಲ: ರೋಟರಿ ಕ್ಲಬ್ ವಿಟ್ಲ ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವಿಟ್ಲ ಜೆ ಎಲ್ ಅಡಿಟೋರಿಯಂನಲ್ಲಿ ನಡೆಯಿತು.


ನೂತನ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಸಿ. ಎಚ್. ಅವರು ಅಧಿಕಾರ ಸ್ವೀಕರಿಸಿದರು. ಹರೀಶ್ ಪೂಜಾರಿ ಸಿ.ಎಚ್. ಅವರು ವಿಟ್ಲ ಪಟ್ಟಣ ಪಂಚಾಯತ್ ನ ಸದಸ್ಯರಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿಯನ್ನು ನಿರ್ವಹಿಸಿದಂತಹ ಅನುಭವಿಯಾಗಿದ್ದಾರೆ.


ಕಾರ್ಯಕ್ರಮದಲ್ಲಿ ಪದಗ್ರಹಣಾಧಿಕಾರಿ ಪಿಡಿಜಿ. ರೊ. ಅಭಿನಂದನ್ ಶೆಟ್ಟಿ, ರೊ.ಪಿಹೆಚ್‌ಎಫ್ ಜಯರಾಮ್ ರೈ ಅಸಿಸ್ಟೆಂಟ್ ಗವರ್ನರ್ ಝೋನ್ IV, ರೊ.ಪಿಹೆಚ್‌ಎಫ್ ಪಲ್ಲವಿ ಕಾರಂತ್ ಲೆಫ್ಟಿನೆಂಟ್ ಝೋನ್ IV, ನಿಕಟಪೂರ್ವ ಅಧ್ಯಕ್ಷರು ಕಿರಣ್ ಕುಮಾರ್ ಬ್ರಹ್ಮಾವರ, ಕಾರ್ಯದರ್ಶಿ ಸೋಮಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.

- Advertisement -