Monday, June 30, 2025
spot_imgspot_img
spot_imgspot_img

ಶೀಘ್ರದಲ್ಲೇ ವೊಡಾಫೋನ್ ಐಡಿಯಾದಿಂದ ಕರೆ ದರ ಏರಿಕೆ!!

- Advertisement -
- Advertisement -

ಮುಂಬೈ: ಈ ವರ್ಷಾಂತ್ಯ ಅಥವಾ ಮುಂದಿನ ಜನವರಿಯಿಂದ ವೊಡಾಫೋನ್ ಐಡಿಯಾ ಕರೆ ದರ ಹಂತ ಹಂತವಾಗಿ ಶೇ. 15ರಿಂದ 20 ರಷ್ಟು ಹೆಚ್ಚಲಿದೆ.

ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ಈ ಐಡಿಯಾ ಮಾಡಿದೆ. ನಿಯಂತ್ರಕ ಸಂಸ್ಥೆಯು ಮೂಲ ಬೆಲೆಯನ್ನು ಏರಿಸುವುದನ್ನು ಟೆಲಿಕಾಂ ಸಂಸ್ಥೆಯು ಕಾಯುತ್ತಿರುವುದಾಗಿ ಹೇಳಲಾಗಿದೆ.

ಬದಲಾವಣೆಯು ಡಿಸೆಂಬರ್ ಹೊತ್ತಿಗೆ ಆಗಬಹುದು. ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವೊಡಾಫೋನ್ ಎಂಬತ್ತು ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಈಗ ದರ ಏರಿಕೆ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಹದಿನೈದು ಪರ್ಸೆಂಟ್ ತನಕ ಏರಿಕೆ ಮಾಡುವ ಸಾಧ್ಯತೆ ಇದ್ದು ಆದರೆ ಅದು ಒಂದೇ ಸಲ ಮಾಡುವುದಿಲ್ಲ ಎಂದು ಕಂಪನಿ ಮೂಲಗಳು ತಿಳಿಸಿವೆ.

ರಿಲಯನ್ಸ್ ಜಿಯೋ ಎಪ್ಪತ್ತು ಲಕ್ಷ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದೆ. ಏರ್ ಟೆಲ್ ಒಂದು ಕೋಟಿ ನಲವತ್ತು ಲಕ್ಷ ಗ್ರಾಹಕರನ್ನು ಸೇರಿಸಿಕೊಂಡಿದೆ.

- Advertisement -

Related news

error: Content is protected !!