Monday, August 3, 2026
spot_imgspot_img
spot_imgspot_img

ಕದನ ವಿರಾಮದ ನಡುವೆಯೂ ಇರಾನ್‌ನ ತೈಲ ಸಂಸ್ಕರಣಾಗಾರದ ಮೇಲೆ ದಾಳಿ

- Advertisement -
- Advertisement -

ಟೆಹ್ರಾನ್: ಕದನ ವಿರಾಮದ ಹೊರತಾಗಿಯೂ ಇರಾನ್‌ನ  ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆದಿದೆ. ಅದಕ್ಕೆ ಪ್ರತಿಯಾಗಿ ಕುವೈತ್   ಯುಎಇ , ಮೇಲೆ ಇರಾನ್‌ ದಾಳಿ ಮಾಡಿದೆ. ‌

ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮ ಜಾರಿಗೆ ಬಂದಿದೆ. ಆದರೂ ಇರಾನ್‌ನ ಲಾವನ್ ದ್ವೀಪದಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಶತ್ರು ದಾಳಿ ಎಂದು ಇರಾನ್‌ ತಿಳಿಸಿದೆ. ರಾಷ್ಟ್ರೀಯ ಇರಾನಿನ ತೈಲ ಸಂಸ್ಕರಣಾ ಮತ್ತು ವಿತರಣಾ ಕಂಪನಿ ಈ ದಾಳಿಯನ್ನು ವರದಿ ಮಾಡಿವೆ.

ಸ್ಥಳೀಯ ಸಮಯ ಸುಮಾರು 10 ಗಂಟೆಗೆ ತೈಲ ಸಂಸ್ಕರಣಾಗಾರ ಹಾನಿಗೊಳಗಾಗಿದೆ ಎಂದು ಕಂಪನಿ ತಿಳಿಸಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಬೆಂಕಿಯನ್ನು ನಂದಿಸಲು ಮತ್ತು ಸ್ಥಳವನ್ನು ಸುರಕ್ಷಿತಗೊಳಿಸಲು ಸುರಕ್ಷತಾ ಮತ್ತು ಅಗ್ನಿಶಾಮಕ ತಂಡಗಳನ್ನು ತಕ್ಷಣವೇ ನಿಯೋಜಿಸಲಾಯಿತು.

ಅಮೆರಿಕ ಮತ್ತು ಇರಾನ್ ನಡುವೆ ಮಂಗಳವಾರ ಘೋಷಿಸಲಾದ ಕದನ ವಿರಾಮ ಒಪ್ಪಂದದ ಹೊರತಾಗಿಯೂ ಈ ದಾಳಿ ನಡೆದಿದೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಆದರೂ ಬುಧವಾರ ಇರಾನ್‌ನಲ್ಲಿ ಮಾತ್ರವಲ್ಲದೆ ಗಲ್ಫ್ ಅರಬ್ ರಾಷ್ಟ್ರಗಳಲ್ಲಿಯೂ ದಾಳಿಗಳು ಪುನರಾರಂಭಗೊಂಡಿವೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!