Tuesday, December 3, 2024
spot_imgspot_img
spot_imgspot_img

ಬುರ್ಖಾ ಹಾಕಿ ಕಾವೇರಿ ಪರ ಹೋರಾಟ ನಡೆಸಿದ ವಾಟಾಳ್ ನಾಗರಾಜ್‌

- Advertisement -
- Advertisement -

ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ವಾಟಾಳ್ ನಾಗರಾಜ್‌ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರು. ಕಾವೇರಿ ನೀರಿಗಾಗಿ ಈಗಾಗಲೇ ಬೆಂಗಳೂರು ಬಂದ್‌ ಯಶಸ್ವಿಯಾಗಿದ್ದು, ನಿನ್ನೆ ಕರ್ನಾಟಕ ಬಂದ್‌ ನಡೆಯಿತು. ಇದರ ಬೆನ್ನಲ್ಲಿಯೇ ಅಕ್ಟೋಬರ್ 5ರಂದು ಕೆಆರ್‌ಎಸ್ ಆಣೆಕಟ್ಟು ಮುತ್ತಿಗೆ ಹಾಕುವುದಕ್ಕೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ವಿಭಿನ್ನವಾಗಿ ಬುರ್ಖಾ ಧರಿಸಿ ಬುರ್ಖಾ ನ್ಯಾಯದ ಸಂದೇಶ ಹಾಗೂ ಬುರ್ಖಾ ಮಹಿಳೆಯರ ಸಂದೇಶ ಹಾಗಾಗಿ ಮಹಿಳೆ ಬಿಂದಿಗೆ ಹಿಡಿದಿರುವ ದೃಶ್ಯ ಇದು ಎಂದಿದ್ದಾರೆ. ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡು ಸರ್ಕಾರದ ವಿರುದ್ಧ ಕಾವೇರಿ ನೀರು ಹರಿಸದಂತೆ ಪ್ರತಿಭಟನೆ ಮಾಡಿದ ವಾಟಾಳ್ ನಾಗರಾಜ್ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವವರೆಗೂ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಇಂದಿನ ಪ್ರತಿಭಟನೆಗೂ ಸರ್ಕಾರ ಬಗ್ಗದಿದ್ದರೆ ಅಕ್ಟೋಬರ್ 5 ರಂದು ಕೃಷ್ಣರಾಜ ಸಾಗರ (ಕೆಆರ್‌ಎಸ್) ಆಣೆಕಟ್ಟೆಗೆ ಮುತ್ತಿಗೆ ಹಾಕಲಾಗುವುದು ಎಂದು ವಾಟಾಳ್ ನಾಗರಾಜ್‌ ತಿಳಿಸಿದರು.

- Advertisement -

Related news

error: Content is protected !!