Saturday, June 28, 2025
spot_imgspot_img
spot_imgspot_img

ವಾಟರ್ ಟ್ಯಾಂಕರ್ -ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಮೃತ್ಯು, ಮತ್ತೋರ್ವ ಗಂಭೀರ..!

- Advertisement -
- Advertisement -

ವಾಟರ್ ಟ್ಯಾಂಕರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದುಬೈಕ್ ಹಿಂಬದಿ ಸವಾರ ಸಾವನಪ್ಪಿದ್ದು ಸವಾರ ಗಂಭೀರ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತಪಟ್ಟ ಬೈಕ್ ಹಿಂಬದಿ ಸವಾರ ಹರೀಶ್ ಹಾಗೂ ಗಂಭೀರ ಗಾಯಗೊಂಡ ಸವಾರ ಸುಚಿತ್ ಎಂದು ಗುರುತಿಸಲಾಗಿದೆ.

ಮಾಗಡಿ ರಸ್ತೆಯ ಕಾವೇರಿ ಫ್ಯಾಷನ್ಸ್ ಬಳಿ ಘಟನೆ ನಡೆದಿದೆ. ಬೈಕ್ ಹಾಗೂ ವಾಟರ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಭಾನುವಾರ ರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ.ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಅಪಘಾತ ನಡೆದಿದೆ. ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿದ್ದು ಮತ್ತೊಬ್ಬ ಸವಾರ ಗಂಭೀರ ಗಾಯವಾಗಿದೆ.

ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಓರ್ವ ಸವಾರ ಹಾರಿ ಬಿದ್ದಿದ್ದಾನೆ. ವಾಟರ್ ಟ್ಯಾಂಕರ್ ಬೈಕ್ ಹಾಗೂ ಇನ್ನೊಬ್ಬ ಸವಾರನನ್ನ ಎಳೆದುಕೊಂಡು ಹೋಗಿದೆ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!