ಸೌಥಂಪ್ಟನ್:ಇಂಗ್ಲೆಂಡ್ – ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಪಡೆ ಉತ್ತಮ ಮುನ್ನಡೆ ಪಡೆದಿದೆ.ಇಂಗ್ಲೆಂಡ್ ನ ಮೊದಲ ಇನ್ನಿಂಗ್ ನ 204 ರನ್ ಗೆ ಉತ್ತರಿಸಿದ ವಿಂಡೀಸ್ 318 ರನ್ ಗಳನ್ನು ಗಳಿಸಿತು.ಎರಡನೇ ದಿನದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದ್ದರಿಂದ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಬ್ರಾಥ್ ವೇಟ್ 65 ರನ್ ಗಳಿಸಿದರೆ, ಬ್ರೂಕ್ಸ್ 39 ರನ್ ಗಳಿಸಿ ಉತ್ತಮ ಜೊತೆಯಾಟ ನಡೆಸಿದರು.
#ENGvWI: Perfect cricket weather today as the sun is out in all its glory?Be sure to track the weather via @accuweather: https://t.co/uNzL9bS2iY
— Windies Cricket (@windiescricket) July 11, 2020
Live scorecard available via our website: https://t.co/aaB1YmYY4f#MenInMaroon #WIReady pic.twitter.com/YBqgTUjCUy
ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ 4 ವಿಕೆಟ್, ಜೇಮ್ಸ್ ಆಂಡರ್ಸನ್ 3 ವಿಕೆಟ್, ಡಾಮ್ ಬೆಸ್ 2 ಮತ್ತು ಮಾರ್ಕ್ ವುಡ್ 1 ವಿಕೆಟ್ ಪಡೆದರು. 114 ರನ್ ಹಿನ್ನಡೆ ಪಡೆದ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿದ್ದು ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದೆ.