- Advertisement -
- Advertisement -


ಚಿಕ್ಕಮಗಳೂರು:ವಾಟ್ಸಾಪ್ ನಲ್ಲಿ ಬಂದ ಲಿಂಕ್ ಅನ್ನು ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಂಡ ಬಳಿಕ ಬ್ಯಾಂಕ್ ಖಾತೆಯಲ್ಲಿದ್ದ 10.49 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.
ಮಾ.20ರಂದು ಚಿಕ್ಕಮಗಳೂರು ನಗರದ ವ್ಯಕ್ತಿಯೊಬ್ಬರಿಗೆ ವ್ಯಾಟ್ಸಪ್ ಗ್ರೂಪ್ ನಲ್ಲಿ ಪಿ.ಎಂ.ಕಿಸಾನ್ ಯೋಜನ ಎಪಿಕೆ ಎಂಬ ಹೆಸರಿನಲ್ಲಿ ಪೋಸ್ಟ್ ಲಿಂಕ್ ಮಾಡಲಾಗಿದ್ದು, ಲಿಂಕ್ ಡೌನ್ ಲೋಡ್ ಮಾಡಿದ ಕೂಡಲೇ ವ್ಯಕ್ತಿಯ ಗಮನಕ್ಕೆ ಬರುವಷ್ಟರಲ್ಲಿ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ 10.49 ಲಕ್ಷ ರೂ ಕಡಿತಗೊಂಡಿದೆ. ಈ ಸಂಬಂಧ ಮಾ.22ರಂದು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
- Advertisement -








