

ಕಾನೂನು ಜಾರಿ ಅಧಿಕಾರಿಗಳಂತೆ ಸೋಗು ಹಾಕಿ ವಂಚಕರು ಹಣ ಸುಲಿಗೆ ಮಾಡುವಂತಹ ಡಿಜಿಟಲ್ ಬಂಧನದ ವಂಚನೆಗಳು ಹೆಚ್ಚುತ್ತಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯದ ಅಂತರ-ಇಲಾಖಾ ಸಮಿತಿ (ಐಡಿಸಿ) ವಾಟ್ಸ್‌ಆ್ಯಪ್ ಗೆ ನಿರ್ದೇಶನ ನೀಡಿದೆ. ಇಂತಹ ವಂಚನೆಗಳಿಂದ ಸುಮಾರು 3000 ಕೋಟಿ ರೂ.ಗೂ ಮೀರಿದ ನಷ್ಟವಾಗಿದ್ದು, ಸರ್ಕಾರ ಮೆಟಾ ಒಡೆತನದ ವಾಟ್ಸ್‌ಆ್ಯಪ್ ಮೇಲೆ ಸುರಕ್ಷೆಯನ್ನು ಬಲಪಡಿಸುವಂತೆ ಒತ್ತಡ ಹೇರುತ್ತಿದೆ ಎಂದು indianexpress.com ವರದಿ ಮಾಡಿದೆ.




ಡಿವೈಸ್ ಐಡಿಗಳನ್ನು ಬ್ಲಾಕ್ ಮಾಡುವಂತೆ ತಿಳಿಸಲಾಗಿದೆ. ವಂಚನೆಗೆ ಸಂಬಂಧಿಸಿದ ಸಾಧನದ ಐಟಿಗಳನ್ನು ಗುರುತಿಸುವ ಮತ್ತು ನಿರ್ಬಂಧಿಸುವ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ವಾಟ್ಸ್‌ಆ್ಯಪ್ ಅನ್ನು ಕೇಳಲಾಗಿದೆ. ಇದರಿಂದ ಪುನರಾವರ್ತಿತ ಅಪರಾಧಿಗಳು ಹೊಸ ಖಾತೆಗಳು ರಚಿಸುವುದನ್ನು ತಡೆಯಬಹುದು. ಸ್ಕ್ವೈಪ್ ತರಹದ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳುವಂತೆ ವಾಟ್ಸ್‌ಆ್ಯಪ್ ಗೆ ಹೇಳಲಾಗಿದೆ. ಹೀಗಾಗಿ ವೇದಿಕೆಯು ಕರೆ ಮಾಡುವವರ ಮಾಹಿತಿ, ಅನುಮಾನಾಸ್ಪದ ಖಾತೆಗಳಿಗೆ ಎಚ್ಚರಿಕೆ ಸಂಕೇತಗಳು ಮತ್ತು ಹಗರಣದ ಜಾಲಗಳ ಸುಧಾರಿತ ಪತ್ತೆಹಚ್ಚುವಿಕೆಯನ್ನು ಪರಿಚಯಿಸಲಿದೆ.ತನಿಖೆಗಳಿಗೆ ಸಹಾಯ ಮಾಡಲು 2021ರ ಐಟಿ ನಿಯಮಗಳ ಪ್ರಕಾರ ಅಳಿಸಲಾದ ಖಾತೆಯ ಡೇಟಾವನ್ನು ಕನಿಷ್ಠ 180 ದಿನಗಳವರೆಗೆ ಉಳಿಸಿಕೊಳ್ಳಲು ಸೂಚಿಸಲಾಗಿದೆ. ಹಾನಿಕಾರಕ ಎಪಿಕೆಗಳ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಂಚನೆಗಳಲ್ಲಿ ಬಳಸುವ ದುರುದ್ದೇಶಪೂರಿತ ಆಂಡ್ರ್ಯಾಡ್ ಫೈಲ್ ಗಳನ್ನು ನಿರ್ಬಂಧಿಸಲು ಕಾರ್ಯ ವಿಧಾನಗಳನ್ನು ಬಲಪಡಿಸಲು ಸೂಚಿಸಲಾಗಿದೆ. AI ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಂದರೆ ಅನುಕರಣೆ, ಅಧಿಕೃತ ಲೋಗೋಗಳ ದುರುಪಯೋಗ ಮತ್ತು ಸಂಶ್ಲೇಷಿತ/ AI ರಚಿತ ವಿಷಯ ಪತ್ತೆಹಚ್ಚಲು ಸುಧಾರಿತ ಮಿಷಿನ್ ಲರ್ನಿಂಗ್ (Enhanced machine learning) ಬಳಸಿಕೊಳ್ಳಲಾಗುವುದು.
► ಸೋಗು ಹಾಕುವ ವಿರುದ್ಧ ಸುರಕ್ಷಾ ಕ್ರಮ
ಪೊಲೀಸ್ ಮತ್ತು ಸರ್ಕಾರಿ ಲಾಂಛನಗಳ ದುರುಪಯೋಗ ತಡೆಯಲು ವಾಟ್ಸ್‌ಆ್ಯಪ್ ಲೋಗೋ ಪತ್ತೆ ಮತ್ತು ಮಾಧ್ಯಮ ಹೊಂದಾಣಿಕೆಯ ವ್ಯವಸ್ಥೆಗಳನ್ನು ನಿಯೋಜಿಸಿದೆ. ಈ ಪರಿಕರಗಳು ಪ್ರೊಫೈಲ್ ಫೋಟೋಗಳನ್ನು ಹೋಲಿಸುತ್ತವೆ ಮತ್ತು ದೆಹಲಿ ಪೊಲೀಸ್, ಮುಂಬೈ ಪೊಲೀಸ್, ಸಿಬಿಐ ಮತ್ತು ಎಟಿಎಸ್ನಂತಹ ಸಂಸ್ಥೆಗಳನ್ನು ಅನುಕರಿಸುವ ಖಾತೆಗಳನ್ನು ತೆಗೆದು ಹಾಕುತ್ತವೆ.
► DoT ನಿರ್ದೇಶನದ ಅನುಸರಣೆ
ದೂರಸಂಪರ್ಕ ಇಲಾಖೆಯು (DoT) 2025ರ ನವೆಂಬರ್ ನಲ್ಲಿ ನೀಡಿದ ನಿರ್ದೇಶನಕ್ಕೆ ಅನುಗುಣವಾಗಿ ವಾಟ್ಸ್‌ಆ್ಯಪ್ 4-6 ತಿಂಗಳೊಳಗೆ ಸಿಮ್ ಬೈಂಡಿಂಗ್ ಅನ್ನು ಕಾರ್ಯಗತಗೊಳಿಸುತ್ತದೆ. ಈ ಕ್ರಮದಿಂದ ಖಾತೆಯು ಸಕ್ರಿಯ ಸಿಮ್ ಕಾರ್ಡ್ಗೆ ಬಂಧಿಸಲಾಗಿರುವುದನ್ನು ಖಚಿತಪಡಿಸುತ್ತದೆ. ಹೀಗಾಗಿ ಅನಾಮಧೇಯತೆ ಮತ್ತು ಬಹು ಸಾಧನದಲ್ಲಿ ಬಳಕೆಯ ದುರುಪಯೋಗ ಕಡಿಮೆಯಾಗುತ್ತದೆ.
► ಕಾನೂನು ಜಾರಿ ಸಹಕಾರ
ವಾಟ್ಸ್‌ಆ್ಯಪ್ ಇದೀಗ ತನಿಖಾ ಸಂಸ್ಥೆಗಳಿಗೆ ಸಮಯಕ್ಕೆ ಸರಿಯಾಗಿ ಪ್ರತಿಸ್ಪಂದನೆ ನೀಡಲು ಬದ್ಧವಾಗಿದೆ. AI-ಚಾಲಿತ ಪತ್ತೆ ವ್ಯವಸ್ಥೆಗಳ ಮೇಲಿನ ಪ್ರಕ್ರಿಯೆಯ ಅಪ್ಡೇಟ್ಗಳನ್ನು ಹಂಚಿಕೊಳ್ಳುವುದು. ಸಂಶ್ಲೇಷಿತ ಅಥವಾ AI-ರಚಿತ ಮಾಹಿತಿಯನ್ನು ವಿಶೇಷವಾಗಿ ವಂಚನೆಗೆ ಬಳಸುವ ಡೀಪ್ಫೇಕ್ ವಿಡಿಯೋ ಕರೆಗಳನ್ನು ಲೇಬಲ್ ಮಾಡುವ ಕುರಿತು ಐಟಿ ನಿಯಮಗಳ ಅನುಸರಣೆಗೆ ಬದ್ಧವಾಗಿದೆ.
► ಹಗರಣ ಹೆಚ್ಚಾಗುತ್ತಿರುವ ಕಳವಳ
ಡಿಜಿಟಲ್ ಬಂಧನ ಹಗರಣಗಳು ಆತಂಕಕಾರಿಯಾಗಿ ಬೆಳೆದಿವೆ. 2024ರಲ್ಲಿ 1,935 ಕೋಟಿ ರೂ. ಮೀರಿದ 1.23 ಲಕ್ಷ ವಂಚನೆ ಪ್ರಕರಣಗಳು ದಾಖಳಾಗಿವೆ. 2022ರ ಅಂಕಿ ಅಂಶಗಳಿಗೆ ಹೋಲಿಸಿದರೆ ಮೂರುಪಟ್ಟು ಹೆಚ್ಚಾಗಿದೆ. ಮ್ಯೂಲ್ ಖಾತೆಗಳ (ಮ್ಯೂಲ್ ಖಾತೆಯು ಅಪರಾಧಿಗಳು ಕದ್ದ ಅಥವಾ ಅಕ್ರಮ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ಬಳಸುವ ಬ್ಯಾಂಕ್ ಖಾತೆಯಾಗಿದೆ, ಆಗಾಗ್ಗೆ ಈ ಹಣವನ್ನು ವರ್ಗಾಯಿಸಲು ಮುಗ್ಧ, ನೇಮಕಗೊಂಡ ವ್ಯಕ್ತಿಗಳ ಖಾತೆಗಳನ್ನು ಬಳಸುತ್ತಾರೆ) ಮೂಲಕ ವಂಚಕರು ಕೋಟಿಗಟ್ಟಲೆ ಹಣವನ್ನು ಬ್ಯಾಂಕ್ಗಳು ಮತ್ತು ಗಡಿಯಾಚೆಗೆ ನಿಮಿಷಗಳಲ್ಲಿ ವರ್ಗಾಯಿಸುತ್ತಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ತನಿಖೆಗೆ ತೆಗೆದುಕೊಂಡು ಬೆಳೆಯುತ್ತಿರುವ ಆತಂಕದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಸರ್ಕಾರ ಕೈಗೊಂಡ ತುರ್ತು ಕ್ರಮಗಳನ್ನು ಗಮನಿಸಿದರೆ ಡಿಜಿಟಲ್ ಬಂಧನದ ಹಗರಣಗಳನ್ನು ನಿಭಾಯಿಸುವ ತುರ್ತು ಅಗತ್ಯವನ್ನು ತೋರಿಸುತ್ತದೆ. ವಾಟ್ಸ್‌ಆ್ಯಪ್ ಸಾಧನ ಐಡಿ ನಿರ್ಬಂಧ, ಸಿಮ್ ಬೈಂಡಿಗ್ ಮತ್ತು AI-ಚಾಲಿತ ಪತ್ತೆ ಮುಂತಾನದ ಕ್ರಮಗಳನ್ನು ಜಾರಿಗೆ ತರಲು ಒಪ್ಪಿಕೊಂಡಿರುವುದರಿಂದ ಸೋಗು ಹಾಕುವವರು ಮತ್ತು ಆಹಣಕಾಸು ವಂಚಕರನ್ನು ತಡೆಯುವಲ್ಲಿ ವೇದಿಕೆ ಪ್ರಮುಖ ಪಾತ್ರ ನಿರ್ವಹಿಸುವ ನಿರೀಕ್ಷೆ ಇದೆ. ಆದರೆ ಈಗಾಗಲೇ ಆಗಿರುವ ನಷ್ಟಗಳನ್ನು ಗಮನಿಸಿದರೆ ಎರಡೂ ತಾಂತ್ರಿಕ ಮತ್ತು ನಿಯಂತ್ರಣ ಸಂಸ್ಥೆಗಳಿಂದ ನಿಗಾ ಇಡುವ ಅಗತ್ಯವನ್ನು ಒತ್ತಿ ಹೇಳುತ್ತದೆ.







