ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಬಗ್ಗೆ ಜಿಲ್ಲಾ ಗವರ್ನರ್ ಶ್ಲಾಘನೆ



ವಿಟ್ಲ: ಲಯನ್ಸ್ ಜಿಲ್ಲಾ ಗವರ್ನರ್ ಭಾರತೀ ಬಿ ಎಂ, pmjf-d8 ರವರು ಲಯನ್ಸ್ ಕ್ಲಬ್ ವಿಟ್ಲ ಸಿಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೋನಪ್ಪ ಮೂಲ್ಯ ಮತ್ತು ಕುಟುಂಬದವರಿಗೆ ಸದಸ್ಯ ಕೃಷ್ಣಪ್ಪ ಮೂಲ್ಯರವರು ದವಸ ಧಾನ್ಯ ಕಿಟ್ ವಿತರಣೆ ಮಾಡಿದರು. ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ವಸಂತ ಶೆಟ್ಟಿ ಎರ್ಮಿನಿಲೆಯವರು ವಿದ್ಯಾರ್ಥಿ ಜೀತೇಶ್ ಎಂಬಾತನಿಗೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡಲಾಯಿತು.


ಜಿಲ್ಲಾ ಗವರ್ನರ್ ಪ್ರೊಜೆಕ್ಟ್‌ಗೆ ಕ್ಲಬ್‌ನ ವತಿಯಿಂದ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷರು ವಸಂತ ಶೆಟ್ಟಿ ಎರ್ಮಿನಿಲೆಯವರು ದೇಣಿಗೆ ನೀಡಿದರು. ಸ್ಥಳೀಯ ಶಾಲೆಗಳಿಗೆ ಧನಸಹಾಯ ನೀಡಲಾಯಿತು. ಕ್ಲಬ್ ಗೆ ವಿ. ಸೀನ ಮತ್ತು ನಾಗರಾಜ್ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ರಿಕ್ಷಾ ಡ್ರೈವರ್ ವಿಠಲರವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಬಗ್ಗೆ ಜಿಲ್ಲಾ ಗವರ್ನರ್ ಮೆಚ್ಚುಗೆ ವ್ಯಕ್ತಪಡಿಸಿದರು.








