- Advertisement -
- Advertisement -


ವಿಟ್ಲ: ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ – ಸಾಲೆತ್ತೂರು ಮಾರ್ಗದ ಸಮೀಪವಿರುವ ವಿಟ್ಲದ ಸೈಂಟ್ ರೀಟಾ ವಿದ್ಯಾಸಂಸ್ಥೆಯ ಮುಂಭಾಗದ ರಸ್ತೆಯಲ್ಲಿ ನಡೆದಿದೆ.
ದ್ವಿಚಕ್ರ ವಾಹನ ಸಾಲೆತ್ತೂರು ಕಡೆಯಿಂದ ವಿಟ್ಲ ಕಡೆಗೆ ಸಂಚರಿಸುತ್ತಿದ್ದು, ರಿಕ್ಷಾ ವಿಟ್ಲದಿಂದ ಕುಡ್ತಮುಗೇರು ಕಡೆಗೆ ಸಂಚರಿಸುತ್ತಿತ್ತು. ಘಟನೆಯ ಪರಿಣಾಮ ದ್ವಿಚಕ್ರ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ರಿಕ್ಷಾ ಚಾಲಕನಿಗೂ ಗಾಯಗಳಾಗಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ರಿಕ್ಷಾ ಮತ್ತೊಂದು ರಿಕ್ಷಾಗೂ ಗುದ್ದಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದಾರೆ.
- Advertisement -