- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಗಾಳಿಯಲ್ಲಿ ಕೊರೊನಾ ಸೋಂಕು ಹರಡುತ್ತದೆ ಎಂಬ ವಿಜ್ಞಾನಿಗಳ ವಾದವನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ. ಆದರೆ ಈ ಬಗ್ಗೆ ನಾವು ಪರಿಶೀಲಿಸುತ್ತೇವೆ ಎಂದು ಡಬ್ಯೂಎಚ್ಒ ತಿಳಿಸಿದೆ.ಸುಮಾರು 32 ದೇಶ 233 ವಿಜ್ಞಾನಿಗಳು ಗಾಳಿಯಲ್ಲಿ ಕೊರೊನಾ ಸೋಂಕು ಹರಡುತ್ತದೆ ಎಂದು ಪುರಾವೆಗಳ ಮೂಲಕ ವಾದ ಮಂಡಿಸಿದ್ದರು. ಹೀಗಾಗಿ ಕೊರೊನಾ ವೈರಸ್ ಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದು ವಿಜ್ಞಾನಿಗಳ ತಂಡ ವಿಶ್ವ ಆರೋಗ್ಯ ಸಂಸ್ಥೆಯನ್ನು ಕೋರಿದೆ.
ಇನ್ನು ಈ ವಿಚಾರ ಜಗತ್ತಿನ ಜನರನ್ನು ಆತಂಕಕ್ಕೆ ದೂಡಿದೆ. ಈ ರೀತಿ ಕ್ರೂರಿ ಕೊರೊನಾ ವೈರಸ್ ಅತ್ಯಂತ ವೇಗವಾಗಿ ಜನರಿಗೆ ಹರಡಲಿದೆ ಎನ್ನುವ ಭಯ ಎಲ್ಲೆಡೆ ಮೂಡಿದೆ.
- Advertisement -