- Advertisement -
- Advertisement -
ಬೆಂಗಳೂರು :ಬೆಂಗಳೂರಿನಲ್ಲಿ ಕೊರೊನಾ ಸೊಂಕು ಹಬ್ಬುತ್ತಿರುವುದರಿಂದ ಇಂದಿನಿಂದ ಒಂದು ವಾರಗಳ ಕಾಲ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಇಂದಿನಿಂದ ಒಂದು ವಾರಗಳ ಲಾಕ್‌ಡೌನ್ ಹೇರಲಾಗಿರುವ ಹಿನ್ನೆಲೆ ಮದ್ಯಪ್ರಿಯರು ಭಾರಿ ಪ್ರಮಾಣದಲ್ಲಿ ವಹಿವಾಟು ನಡೆಸಿದ್ದಾರೆ. ನಿನ್ನೆ ಒಂದೇ ದಿನದಲ್ಲಿ ಕೆಎಸ್‌ಬಿಸಿಎಲ್‌ಗೆ ಬರೋಬ್ಬರಿ 230 ಕೊಟಿ ರೂಪಾಯಿ ಆದಾಯವಾಗಿದೆ.


215 ಕೋಟಿ ಮೌಲ್ಯದ 4.89 ಲಕ್ಷ ಲೀಟರ್ ಐಎಲ್‌ಎಲ್ ಮದ್ಯ ಮಾರಾಟವಾಗಿದ್ದರೆ 15 ಕೋಟಿ ಮೌಲ್ಯದ 0.83 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಲಾಕ್‌ಡೌನ್‌ನಿಂದ ಹೆಚ್ಚು ವ್ಯಾಪಾರ ನಡೆಯಲಿದೆ ಎಂಬುದನ್ನು ಮೊದಲೇ ಅರಿತಿದ್ದ ಬಾರ್ ಮಾಲೀಕರು ಕೆಎಸ್‌ಬಿಸಿಎಲ್‌ನಿಂದ ಭಾರಿ ಪ್ರಮಾಣದಲ್ಲಿ ಖರೀದಿ ಮಾಡಿದ್ದರು.

- Advertisement -