Sunday, June 29, 2025
spot_imgspot_img
spot_imgspot_img

ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳೆ ಆತ್ಮಹತ್ಯೆಗೆ ಯತ್ನ..!

- Advertisement -
- Advertisement -

ಪ್ರೀತಿ ನಿರಾಕರಿಸಿದ್ದಕ್ಕೆ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ನಂಜನಗೂಡಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಯುವತಿ ಬಿಹಾರ ಮೂಲದ ನಾಸಿಂ ಬೇಗಂ(31) ಎಂದು ಗುರುತಿಸಲಾಗಿದೆ.

ಖಾಸಗಿ ಹೋಟೆಲ್‌ನ ಕಟ್ಟಡದ ಮೇಲ್ಭಾಗದಲ್ಲಿ ನಿಂತು ಮದುವೆ ಆಗದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯುವುದಾಗಿ ಹೇಳಿ ರಂಪಾಟ ಮಾಡಿದ್ದಾಳೆ.

ಈಗಾಗಲೇ ಮದುವೆ ಆಗಿದ್ದ ಬಿಹಾರ ಮೂಲದ ನಾಸಿಂ ಬೇಗಂ, ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಆಸಿಬೂರ್ ರೆಹಮಾನ್ ಎಂಬಾತನನ್ನು ಪ್ರೀತಿಸಿದ್ದಳು. ನಂಜನಗೂಡಿನ ಹಿಮ್ಮಾವು ಗ್ರಾಮದಲ್ಲಿ ವಾಸವಾಗಿದ್ದ ಆಸಿಬೂರ್ ರೆಹಮಾನ್ ಏಷಿಯನ್ ಪೈಂಟ್ಸ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದಿಂದ ಆಸಿಬೂರ್ ರೆಹಮಾನ್ ಹಾಗೂ ನಾಸಿಂ ಬೇಗಂ ಪ್ರೀತಿ ಮಾಡುತ್ತಿದ್ದರು. ಕಳೆದ ವಾರ ಆಸಿಬೂರನನ್ನು ನೋಡಲು ನಾಸಿಂ ಬೇಗಂ ಬಿಹಾರದಿಂದ ನಂಜನಗೂಡಿಗೆ ಬಂದಿದ್ದಳು. ಆಕೆಯನ್ನು ಕಾಣಲು ಕಾತುರನಾಗಿದ್ದ ಆಸಿಬೂರ ಮಹಿಳೆಯನ್ನು ಕಂಡ ಮೇಲೆ ಮನಸ್ಸು ಬದಲಾಗಿತ್ತು. ಯಾಕೆಂದರೆ ನಾಸಿಂ ಬೇಗಂಗೆ ಈಗಾಗಲೇ ಮದುವೆ ಆಗಿತ್ತು. ಜತೆಗೆ ವಯಸ್ಸಿನ ಅಂತರ ಹೆಚ್ಚಿದೆ ಎಂದು ಮದುವೆಗೆ ನಿರಾಕರಿಸಿದ.

ಈತನ ಮಾತಿನಿಂದ ಸಿಟ್ಟಿಗೆದ್ದ ವಿವಾಹಿತೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದ್ದಾಳೆ. ಯುವಕ ಮದುವೆಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ನಾಸಿಂ ಬೇಗಂ ಆಕೆ ಇದ್ದ ಹೋಟೆಲ್‌ನ ಕಟ್ಟಡ ಏರಿ ಹೈಡ್ರಾಮಾವನ್ನೇ ಮಾಡಿದ್ದಳು. ಇತ್ತ ವಿಷಯ ತಿಳಿಯುತ್ತಿದ್ದಂತೆ ನಂಜನಗೂಡು ಪಟ್ಟಣ ಪೊಲೀಸರು ಸ್ಥಳಕ್ಕಾಗಮಿಸಿ, ನಾಸಿಂ ಬೇಗಂನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂಜನಗೂಡು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!