Sunday, June 29, 2025
spot_imgspot_img
spot_imgspot_img

ಗೃಹಪ್ರವೇಶದ ಊಟ ಸೇವಿಸಿ ಮಹಿಳೆ ಸಾವು; 20ಕ್ಕೂ ಅಧಿಕ ಮಂದಿ ಅಸ್ವಸ್ಥ..!

- Advertisement -
- Advertisement -

ಮೈಸೂರು: ಗೃಹಪ್ರವೇಶದ ಸಮಾರಂಭವದಲ್ಲಿ ಊಟ ಸೇವಿಸಿದ್ದ ಗ್ರಾಮದ ಜನ ಅಸ್ವಸ್ಥರಾಗಿದ್ದು, ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಮೈಸೂರು ತಾಲೂಕು ಮಾರ್ಬಳ್ಳಿಯಲ್ಲಿ ನಡೆದಿದೆ.

ಗೃಹಪ್ರವೇಶ ಕಾರ್ಯದಲ್ಲಿ ಊಟ ಸೇವಿಸಿದ ಬಳಿಕ ಗ್ರಾಮದ ಜನರಿಗೆ ವಾಂತಿ, ಭೇದಿ ಶುರುವಾಗಿದೆ. ಪುರುಷರು, ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ನಿನ್ನೆ ಮಾರ್ಬಳ್ಳಿಯಲ್ಲಿ ಮನೆಯೊಂದರ ಗೃಹ ಪ್ರವೇಶ ಕಾರ್ಯ ನಡೆದಿತ್ತು. ಈ ವೇಳೆ ಗೃಹ ಪ್ರವೇಶದ ಆಹಾರ ಸೇವಿಸಿ 65 ವರ್ಷದ ಶಿವಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾರ್ಬಳ್ಳಿಯ ಗ್ರಾಮಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಹಲವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

- Advertisement -

Related news

error: Content is protected !!