- Advertisement -
- Advertisement -



ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮವು ಇಂದು ನಡೆಯಿತು. ಇಂದಿನ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಎ. ವಿ ಸಗ್ರಿತ್ತಾಯರವರು ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾನುಶಂಕರ ಬನ್ನಿತ್ತಾಯ, ನೇಮೋತ್ಸವ ಸಮಿತಿ ಬೊಂಡಲ, ಶಂಕರ್ ಎನ್. ಚಿತ್ರದುರ್ಗ, ವೈಶಾಕ್ ಬೋಳಂತೂರ್, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ಕ್ಷೇತ್ರದಲ್ಲಿ ಇಂದಿನ ವಿಶೇಷ ರುದ್ರಪಾರಾಯಣ ಕಾರ್ಯಕ್ರಮವು ಸುಮಾರು 150 ಕ್ಕೂ ಅಧಿಕ ವೈದಿಕರಿಂದ ನಡೆಯಿತು. ಅತಿರುದ್ರಯಾಗ ಸಮಿತಿ ವತಿಯಿಂದ ಪೂರ್ವಭಾವಿ ಸಭೆಯು ನಡೆಯಿತು. ಸಭೆಯಲ್ಲಿ ಪ್ರಮುಖ ಗಣ್ಯರು ಭಕ್ತಾಭಿಮಾನಿಗಳು, ಸಂಘ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.
- Advertisement -