Saturday, May 4, 2024
spot_imgspot_img
spot_imgspot_img

ಕಲೋತ್ಸವದಲ್ಲಿ ಯಕ್ಷಗಾನಕ್ಕೆ ಅವಮಾನ; ಚೌಕಿ ಪೂಜೆಗೆ ಸಂಘಟಕರಿಂದ ಅಡ್ಡಿ..! ಕಲಾವಿದರಿಂದ ಆಕ್ರೋಶ

- Advertisement -G L Acharya panikkar
- Advertisement -

ರಾಜ್ಯ ಶಾಲಾ ಕಲೋತ್ಸವದಲ್ಲಿ ಯಕ್ಷಗಾನಕ್ಕೆ ಸಂಘಟಕರು ಅವಮಾನವೆಸಗಿದ ಬಗ್ಗೆ ಆರೋಪ ಕೇಳಿಬಂದಿದೆ. ಯಕ್ಷಗಾನ ಪ್ರದರ್ಶನದ ಪೂರ್ವಭಾವಿಯಾಗಿ ನಡೆಯುವ ಚೌಕಿ ಪೂಜೆ ವೇಳೆ ಸಂಘಟಕರು ಬಂದು ಪೂಜೆಗೆ ಅಡ್ಡಿಪಡಿಸಿ, ಪೂಜೆಗಾಗಿ ಉರಿಸಿಟ್ಟಿದ್ದ ದೀಪವನ್ನು ನಂದಿಸಿ ಯಕ್ಷಗಾನ ಕಲೆಗೆ ಅವಮಾನ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆ ನೆರೆ ರಾಜ್ಯ ಕೇರಳದ ಕಲ್ಲಿಕೋಟೆಯಲ್ಲಿ ನಡೆದಿದೆ.

ಕಲ್ಲಿಕೋಟೆಯಲ್ಲಿ ನಡೆಯುತ್ತಿರುವ ರಾಜ್ಯ ಶಾಲಾ ಕಲೋತ್ಸವದಲ್ಲಿ ಹೈಸ್ಕೂಲ್ ವಿಭಾಗದ ಯಕ್ಷಗಾನ ಸ್ಪರ್ಧೆಯ ಮುಂಚಿತ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡ್ ಜಿಲ್ಲೆಗಳ ಯಕ್ಷಗಾನ ತಂಡಗಳು ಸೇರಿ ಚೌಟಿ ಪೂಜೆ ನಡೆಸಿದೆ. ಈ ವೇಳೆ ಅಲ್ಲಿಗೆ ತಲುಪಿದ ಸಂಘಟಕ ಸಮಿತಿ ಪದಾಧಿಕಾರಿಗಳು ಪೂಜೆ ನಡೆಸಕೂಡದೆಂದು ತಿಳಿಸಿದ್ದಾರೆ. ಅಲ್ಲದೆ ಪೂಜೆಗಾಗಿ ಉರಿಸಿಟ್ಟಿದ್ದ ದೀಪವನ್ನು ನಂದಿಸಿದ್ದಾರೆ.

ಕಲೋತ್ಸವ ವೇದಿಕೆಗಳಲ್ಲೂ ಇದನ್ನು ಅನುಸರಿಸಲಾಗುತ್ತಿದೆಯೆಂದು ಯಕ್ಷಗಾನ ಕಲಾವಿದರು ತಿಳಿಸಿದರೂ ಸಂಘಟಕ ಸಮಿತಿ ಪದಾಧಿಕಾರಿಗಳು ಅದಕ್ಕೆ ಕಿವಿಗೊಡಲಿಲ್ಲ. ಚೌಕಿ ಪೂಜೆಗೆ ತಡೆಯೊಡ್ಡಿ ದೀಪವನ್ನು ನಂದಿಸಿದ ಬಗ್ಗೆ ಕಲಾವಿದರು ನೀಡಿದ ದೂರಿನ೦ತೆ ಪೊಲೀಸರು ತಲುಪಿ ಸಂಘಟಕರೊಂದಿಗೆ ಮಾತುಕತೆ ನಡೆಸಿದ್ದು, ಈ ವೇಳೆ ವಾದ್ಯೋಪಕರಣ ಬಳಸಿ ಶಬ್ದವು೦ಟು ಮಾಡಿರುವುದಾಗಿ ಸಂಘಟಕರು ಆರೋಪಿಸಿದ್ದಾರೆ.

ಆ ವೇಳೆ ವೇದಿಕೆಯಲ್ಲಿ ಯಾವುದೇ ಸ್ಪರ್ಧೆ ನಡೆಯುತ್ತಿರಲಿಲ್ಲವೆಂದು ಕಲಾವಿದರು ತಿಳಿಸಿದ್ದಾರೆ. ಘಟನೆ ತಿಳಿದು ಪತ್ರಕರ್ತರು ಸ್ಥಳಕ್ಕೆ ತಲುಪಿದಾಗ ಅವರಿಗೆ ಸಂಘಟಕರು ಹಾಗೂ ಪೊಲೀಸರು ತಡೆಯೊಡ್ಡಿದರೆಂದೂ ದೂರಲಾಗಿದೆ. ಸಂಘಟಕ ಸಮಿತಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಕಲಾವಿದರು ಒತ್ತಾಯಿಸಿದ್ದಾರೆ. ಕೊನೆಗೆ ಪೊಲೀಸರು ಸಮಾಧಾನಪಡಿಸಿ ಕಲಾವಿದರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಸಂಘಟಕ ಸಮಿತಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಪೊಲೀಸರು ತಯಾರಾಗಲಿಲ್ಲವೆ೦ದೂ ದೂರಲಾಗಿದೆ.

- Advertisement -

Related news

error: Content is protected !!