Sunday, October 6, 2024
spot_imgspot_img
spot_imgspot_img

ದ .ಕ .ಜಿಲ್ಲಾ ಕಿಸಾನ್ ಕಾಂಗ್ರೆಸ್ ನ ವಿಟ್ಲ-ಉಪ್ಪಿನಂಗಡಿ  ಬ್ಲಾಕ್ ನ ಅಧ್ಯಕ್ಷರಾಗಿ ಎಲ್ಯಣ್ಣ ಪೂಜಾರಿ ಆಯ್ಕೆ

- Advertisement -
- Advertisement -

ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ದ.ಕ. ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಎಲ್ಯಣ್ಣ ಪೂಜಾರಿ ಮೈರುಂಡರವರನ್ನು ಆಯ್ಕೆ ಮಾಡಲಾಗಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹಾಗೂ ಕೊಳ್ನಾಡು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್ ರವರ ಶಿಫಾರಸ್ಸಿನಂತೆ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಆಯ್ಕೆ ಪ್ರಕ್ರೀಯೆ ನಡೆದಿದೆ.

ಎಲ್ಯಣ್ಣ ಪೂಜಾರಿ ಮೈರುಂಡರವರು ಹಲವಾರು ವರುಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದು, ಬಳಿಕ ವಿಟ್ಲ ಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡು ಗ್ರಾಮದಲ್ಲಿ ಕಾಂಗ್ರೆಸ್ ಭಲವರ್ದನೆಗೆ ಶ್ರಮಿಸಿದ್ದರು. ಇದೀಗ ಅವರನ್ನು ದ .ಕ .ಜಿಲ್ಲಾ ಕಿಸಾನ್ ಕಾಂಗ್ರೆಸ್ ನ ವಿಟ್ಲ-ಉಪ್ಪಿನಂಗಡಿ  ಬ್ಲಾಕ್ ನ ಅದ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

- Advertisement -

Related news

error: Content is protected !!