Friday, June 14, 2024
spot_imgspot_img
spot_imgspot_img

ಯೋಗಿ ಹುಟ್ಟುಹಬ್ಬಕ್ಕೆ ಒಂದು ಸ್ಪೆಷಲ್​ ಗಿಫ್ಟ್​ …!

- Advertisement -G L Acharya panikkar
- Advertisement -

ಇಂದು ಯೋಗಿ ಅವರ ಹುಟ್ಟುಹಬ್ಬ. ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್​ಗಳ ತರಹ ಯೋಗಿ, ಸಹ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.ಈ ಮಧ್ಯೆ, ಯೋಗಿ ಅಭಿನಯದ ‘ಒಂಬತ್ತನೇ ದಿಕ್ಕು’ ಚಿತ್ರತಂಡವು ಯೋಗಿ ಹಬ್ಬಕ್ಕೆ ಒಂದು ಸ್ಪೆಷಲ್​ ಗಿಫ್ಟ್​ ಕೊಟ್ಟಿದೆ.ಇಷ್ಟರಲ್ಲಿ ಆ ಚಿತ್ರವೇ ಬಿಡುಗಡೆಯಾಗಿರಬೇಕಿತ್ತು. ಆದರೆ, ಚಿತ್ರೀಕರಣ ಮುಗಿದಿದ್ದರೂ, ಲಾಕ್​ಡೌನ್​ನಿಂದ ಚಿತ್ರ ಬಿಡುಗಡೆಯಾಗುವುದಕ್ಕೆ ಸಾಧ್ಯವಾಗಿಲ್ಲ.ಯೋಗಿ ಹುಟ್ಟುಹಬ್ಬದ ಸಂದರ್ಭದಲ್ಲಿ, ಚಿತ್ರದ ಟೀಸರ್​ ಬಿಡುಗಡೆ ಮಾಡುವ ಮೂಲಕ, ಚಿತ್ರತಂಡವು ಒಂದು ಸ್ಪೆಷಲ್​ ಗಿಫ್ಟ್​ ಕೊಟ್ಟಿದೆ. ಅಷ್ಟೇ ಅಲ್ಲ, ಈ ‘ಒಂಬತ್ತೇನೇ ದಿಕ್ಕು’ ಏನಿರಬಹುದು ಎಂಬ ಪ್ರಶ್ನೆಗೆ, ಈ ಟೀಸರ್​ ಮೂಲಕ ಉತ್ತರ ಸಿಕ್ಕಿದೆ.

ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಈ ಟೀಸರ್​ ಬಿಡುಗಡೆ ಮಾಡಲಾಗಿದೆ.‘ಒಂಬತ್ತನೇ ದಿಕ್ಕು’ ಚಿತ್ರವನ್ನು ದಯಾಳ್​ ಪದ್ಮನಾಭನ್​ ಬರೆದು ನಿರ್ದೇಶಿಸಿದ್ದು, ಯೋಗಿ, ಅದಿತಿ ಪ್ರಭುದೇವ, ಸಾಯಿಕುಮಾರ್​ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಗುರು ದೇಶಪಾಂಡೆ ಮತ್ತು ದಯಾಳ್​ ಪದ್ಮನಾಭನ್​ ಜತೆಯಾಗಿ ನಿರ್ಮಿಸಿದ್ದಾರೆ.


- Advertisement -

Related news

error: Content is protected !!