2ನೇ ವರ್ಷದ ಪ್ರೌಢಶಾಲಾ ವಿಭಾಗದ ಬಾಲಕ/ಬಾಲಕಿಯರ ಆಹ್ವಾನಿತ ತಂಡಗಳ ಮತ್ತು 25 ವರ್ಷ ವಯೋಮಿತಿಯ ಪುರುಷರ ರಾಜ್ಯ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ
ಸಾಧಕರಿಗೆ ಸನ್ಮಾನ ಕಾರ್ಯಕ್ರಮ





ಬೆಳ್ತಂಗಡಿ : ಯಂಗ್ ಬಾಯ್ಸ್ ಸವಣಾಲು ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ.) ಬೆಂಗಳೂರು, ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ.), ಬೆಳ್ತಂಗಡಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ.) ಇವರ ಸಹಭಾಗಿತ್ವದಲ್ಲಿ, ಬಡ ಮಕ್ಕಳ ವಿದ್ಯಾಭ್ಯಾಸ ಸಹಾಯಾರ್ಥ 2ನೇ ವರ್ಷದ ಪ್ರೌಢಶಾಲಾ ವಿಭಾಗದ ಬಾಲಕ/ಬಾಲಕಿಯರ ಆಹ್ವಾನಿತ ತಂಡಗಳ ಮತ್ತು 25 ವರ್ಷ ವಯೋಮಿತಿಯ ಪುರುಷರ ರಾಜ್ಯ ಮಟ್ಟದ ಮ್ಯಾಟ್ ’ಕಬಡ್ಡಿ ಪಂದ್ಯಾಟ-2026’ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಏಪ್ರಿಲ್ 18 ರ ಶನಿವಾರ ಬೆಳಿಗ್ಗೆ 9 ಗಂಟೆಗೆ ಬೆಳ್ತಂಗಡಿ ಸಂತೆಕಟ್ಟೆ ಸಮಾಜ ಮಂದಿರದಲ್ಲಿ ನಡೆಯಲಿದೆ.
ಕಬಡ್ಡಿ ಪಂದ್ಯಾಟದಲ್ಲಿ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಉತ್ತಮ ಆಲ್ ರೌಂಡರ್ ಹಾಗೂ ಅತ್ಯಂತ ಶಿಸ್ತಿನ ಆಟಗಾರ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪಂದ್ಯಾಟದ ವೀಕ್ಷಣೆ ವಿವರಣೆಯನ್ನು ವಿಜಯ್ ಗೌಡ ಅತ್ತಾಜೆ ಮತ್ತು ದಿವಾಕರ್ ಉಪ್ಪಳ ಇವರು ನಡೆಸಿಕೊಡಲಿದ್ದಾರೆ.
ವಿಶೇಷ ಸನ್ಮಾನಿತರು, ಗಗನ್ ಗೌಡ ಪ್ರೊ ಕಬಡ್ಡಿ ಆಟಗಾರರು, ಕೃಷ್ಣಾನಂದ ರಾವ್ ತರಬೇತುದಾರರು, ಶ್ರೀ ಧ.ಮಂ. ಕಾಲೇಜು ಉಜಿರೆ., ವಿಘ್ನೇಶ್ ಶೆಟ್ಟಿ ರಾಷ್ಟ್ರೀಯ ಕಬಡ್ಡಿ ಆಟಗಾರ., ಕು.ಧನಲಕ್ಷ್ಮೀ ಭಾರತ ತಂಡದ ಮಹಿಳಾ ಆಟಗಾರ್ತಿ., ಶ್ರೀಮತಿ ಹಂಸಾವತಿ, ತರಬೇತುದಾರರು ಆಳ್ವಾಸ್ ಕಾಲೇಜು ಮೂಡಬಿದ್ರೆ., ವಿನಯ್ ಚಂದ್ರ ಆಳ್ವ, ರಾಷ್ಟ್ರೀಯ ಕಬಡ್ಡಿ ಆಟಗಾರ.
25 ವರ್ಷ ವಯೋಮಿತಿ ವಿಭಾಗದ ಪ್ರವೇಶ ಶುಲ್ಕ 800/-, ಪ್ರೌಢಶಾಲಾ ವಿಭಾಗದ ಬಾಲಕ/ಬಾಲಕಿಯರಿಗೆ ಉಚಿತ ಪ್ರವೇಶ.
25 ವರ್ಷ ವಯೋಮಿತಿ ವಿಭಾಗದ ಬಹುಮಾಗಳು:
- ಪ್ರಥಮ- ₹.30,001 ಯಂಗ್ ಬಾಯ್ಸ್ ಟ್ರೋಫಿ
- ದ್ವಿತೀಯ- ₹.22,001 ಯಂಗ್ ಬಾಯ್ಸ್ ಟ್ರೋಫಿ
- ತೃತೀಯ- ₹.12,001 ಯಂಗ್ ಬಾಯ್ಸ್ ಟ್ರೋಫಿ
- ಚತುರ್ಥ- ₹.12,001 ಯಂಗ್ ಬಾಯ್ಸ್ ಟ್ರೋಫಿ
ಪ್ರೌಢಶಾಲಾ ವಿಭಾಗದ ಬಾಲಕ/ಬಾಲಕಿಯರ ಬಹುಮಾನಗಳು:
- ಪ್ರಥಮ- ₹.5,001 ಯಂಗ್ ಬಾಯ್ಸ್ ಟ್ರೋಫಿ
- ದ್ವಿತೀಯ- ₹.3,001 ಯಂಗ್ ಬಾಯ್ಸ್ ಟ್ರೋಫಿ
- ತೃತೀಯ- ₹.2,001 ಯಂಗ್ ಬಾಯ್ಸ್ ಟ್ರೋಫಿ
- ಚತುರ್ಥ- ₹.2,001 ಯಂಗ್ ಬಾಯ್ಸ್ ಟ್ರೋಫಿ
ವಿಶೇಷ ಸೂಚನೆ:
- ಪ್ರೌಢಶಾಲೆ ವಿಭಾಗದ ಕಬಡ್ಡಿ ಪಂದ್ಯಾಟ 09 ಗಂಟೆಗೆ ಪ್ರಾರಂಭ, ಆಹ್ವಾನಿತ ತಂಡಗಳಿಗೆ ಮಾತ್ರ ಅವಕಾಶ.
- 25ರ ವಯೋಮಿತಿಯ ಕಬಡ್ಡಿ ಪಂದ್ಯಾಟ ಸಂಜೆ 04 ಗಂಟೆಗೆ ಪ್ರಾರಂಭವಾಗುತ್ತದೆ.
- 25ರ ವಯೋಮಿತಿಯ ಆಟಗಾರರು ಏಪ್ರಿಲ್ 05 ರ ಮುಂಚಿತವಾಗಿ ಪ್ರವೇಶ ಶುಲ್ಕ ನಮೂದಿಸಬೇಕು, ಮೊದಲ 18 ತಂಡಗಳಿಗೆ ಮಾತ್ರ ಅವಕಾಶ.
- 25ರ ವಯೋಮಿತಿಯ ಕಬಡ್ಡಿ ಪಂದ್ಯಾಟದಲ್ಲಿ 2000 ಇಸವಿಯ ಮತ್ತು ಜನವರಿ 01 ರ ನಂತರದ ಆಟಗಾರರಿಗೆ ಮಾತ್ರ ಅವಕಾಶ.
- ಆಧಾರ್ ಕಾರ್ಡ್ ಕಡ್ಡಾಯ, ಸಂಘಟಕರ ತೀರ್ಮಾನವೇ ಅಂತಿಮ ತೀರ್ಮಾನ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8197062403, 9632212084, 7899218762, 8277770438








