Tuesday, July 21, 2026
spot_imgspot_img
spot_imgspot_img

ವಿಟ್ಲ: ಯುವಕನೋರ್ವನಿಗೆ ಚೂರಿಯಿಂದ ಹಲ್ಲೆ; ದೂರು ದಾಖಲು

- Advertisement -
- Advertisement -
vtv vitla

ವಿಟ್ಲ: ಯುವಕನೋರ್ವನಿಗೆ ಚೂರಿಯಿಂದ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಬ್ದುಲ್ ಅಜೀಜ್ ಎಂಬಾತನ‌ ಮೇಲೆ ಅಬೂಬಕ್ಕರ್ ಸಿದ್ದೀಕ್ ಎಂಬಾತನು ಚೂರಿಯಿಂದ ಚುಚ್ಚಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಅಬೂಬಕ್ಕರ್ ಸಿದ್ದೀಕ್ ಎಂಬಾತನು ಮಕ್ಕಳ ಎದುರು ಸಿಗರೇಟು ಸೇದಿದ್ದಕ್ಕೆ ಅಬ್ದುಲ್ ಅಜೀಜ್ ಆಕ್ಷೇಪಿಸಿದ್ದು ಇದೇ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.

ಭಾನುವಾರ ಅಬ್ದುಲ್ ಅಜೀಜ್ ಮನೆಯಲ್ಲಿರುವಾಗ ಕೇಪು ಗ್ರಾಮದ ಅಡ್ಯನಡ್ಕ ಎಂಬಲ್ಲಿನ‌ ಕರೀಂ ಎಂಬವರ ಚಿಕನ್‌ ಸೆಂಟರ್ ಗೆ ಅಬೂಬಕ್ಕರ್ ಸಿದ್ದೀಕ್ ನನ್ನು ಬರುವಂತೆ ಹೇಳಿದ್ದು, ಈ ವೇಳೆ ಬಂದ ಅಬ್ದುಲ್‌ ಅಜೀಜ್ ಗೆ ಅವಾಚ್ಯವಾಗಿ ನಿಂದಿಸಿ, ಸಿಗರೇಟ್ ಸೇದಬಾರದೆಂದು ನನಗೆ ನೀನು ಬುದ್ದಿ ಹೇಳುತ್ತೀಯಾ ಎಂದು ಬೈದು ,ಚಿಕನ್ ಸೆಂಟರ್ ನಲ್ಲಿದ್ದ ಚೂರಿಯನ್ನು ಹಿಡಿದುಕೊಂಡು ಬಂದು ಸಿದ್ದೀಕ್ ಎದೆಯ ಕೆಳಗೆ ಹೊಟ್ಟೆಯ ಭಾಗಕ್ಕೆ ಚುಚ್ಚಿದ್ದಾನೆಂದು ಆರೋಪಿಸಲಾಗಿದೆ.

ಈ ವೇಳೆ ಅಲ್ಲೇ ಇದ್ದ ಇಶಾಮ್, ಕರೀಂ, ಜಲೀಲ್ ತಡೆದಿದ್ದಾರೆ.ಈ ವೇಳೆ ಅಬೂಬಕ್ಕರ್ ಸಿದ್ದೀಕ್ ಕೊಲೆ ಬೆದರಿಕೆ ಹಾಕಿ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಾಳು ಅಜೀಜ್‌ನನ್ನು ಜಲೀಲ್ ಚಿಕಿತ್ಸೆಗಾಗಿ ವಿಟ್ಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನೂ ಇದೇ ಪ್ರಕರಣಕ್ಕೆ ಸಂಬಂಧಿಸಿ ಅಬ್ದುಲ್ ಅಜೀಜ್, ಜಲೀಲ್, ಇಶಾಮ್, ಫರ್‌ಹಾನ್‌ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅಬೂಬಕ್ಕರ್ ಸಿದ್ದೀಕ್ ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!