Wednesday, September 9, 2026
spot_imgspot_img
spot_imgspot_img

ಧರ್ಮಸ್ಥಳ ಪ್ರಕರಣ: ಆರು ಮಂದಿ ಯೂಟ್ಯೂಬರ್ ಗಳಿಗೆ ಎಸ್.ಐ.ಟಿ ನೋಟಿಸ್

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು. ಎಸ್.ಐ.ಟಿ ಕಚೇರಿಗೆ ಆರು ಮಂದಿ ಯೂಟ್ಯೂಬರ್ ಗಳು ಅ.3 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್‌ ಜಾರಿ ಮಾಡಿದ್ದಾರೆ. ಜೊತೆಯಲ್ಲಿ ಹೋರಾಟಗಾರ ಜಯಂತ್.ಟಿ ಮಗ ಜೀವನ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ.

ಯೂಟ್ಯೂಬರ್ ಗಳಾದ ಡಿ ಟಾಸ್ಕ್ ಯೂಟ್ಯೂಬ‌ರ್ ದಿನೇಶ್‌, ದೂತ ಯೂಟ್ಯೂಬರ್ ಸಮೀರ್.ಎಮ್.ಡಿ, ಸಂಚಾರಿ ಸ್ಟಡಿಯೋ ಯೂಟ್ಯೂಬರ್ ಸಂತೋಷ್ ಕಡಬ, ಕುಡ್ಲ ರಾಮ್ ಪೇಜ್ ಯೂಟ್ಯೂಬ‌ರ್ ಅಜಯ್ ಅಂಚನ್, ಯುನೈಟೆಡ್ ಮೀಡಿಯಾ ಯೂಟ್ಯೂಬ‌ರ್ ಅಭಿಷೇಕ್ ಸೇರಿ ಒಟ್ಟು ಆರು ಮಂದಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.ಹೋರಾಟಗಾರ ಜಯಂತ್.ಟಿ ಮಗ ಜೀವನ್ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ವಿಡಿಯೋ ಮಾಡಿದ ಪ್ರಕರಣಕ್ಕೆ ವಿಚಾರಣೆ ಮಾಡಲು ನೋಟಿಸ್‌ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!