- Advertisement -
- Advertisement -
ವಿಠಲ ಪದವಿ ಪೂರ್ವ ಕಾಲೇಜು ತಂಡ ಪ್ರಥಮ ಸ್ಥಾನ
ನಾಲ್ಕನೇ YSPA National Federation cup 2024 17ರ ವಯೋಮಿತಿಯ ಬಾಲಕರ ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯು ನವೆಂಬರ್ 8ರಿಂದ 10ರವರೆಗೆ ಗೋವಾದಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ವಿಠಲ ಪದವಿ ಪೂರ್ವ ಕಾಲೇಜಿನ (ಧ್ಯಾನ್, ಮನೀಶ್, ಉತ್ತಮ್, ಜಸ್ವಂತ್, ಆಕಾಶ್, ಮೊಹಮ್ಮದ್ ರಾಜ಼ಿ ಕೆ, ಮೊಹಮ್ಮದ್ ಮುಸ್ತಾಕ್, ಮೋಕ್ಷಿತ್, ಶ್ರವಣ್ ರೈ , ಕಿಶನ್, ಕೀರ್ತೆಶ್, ಸುಬ್ರಮಣ್ಯ) ತಂಡವು ಪ್ರಥಮ ಸ್ಥಾನವನ್ನು ಪಡೆದಿದೆ.
ಇವರಿಗೆ ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಆಟಗಾರ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀನಿವಾಸ್ ಗೌಡ ಮತ್ತು ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಆಟಗಾರರಾದ ತುಳಸಿ ಶೆಟ್ಟಿ ತರಬೇತಿಯನ್ನು ನೀಡಿರುತ್ತಾರೆ.
ಮಕ್ಕಳ ಸಾಧನೆಗೆ ಮತ್ತು ತರಬೇತುದಾರರ ಪರಿಶ್ರಮಕ್ಕೆ ವಿಠಲ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ನೌಕರ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
- Advertisement -