- Advertisement -
- Advertisement -
ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಬಿಎಸ್ ವೈ ಪುತ್ರಿ ಪದ್ಮಾವತಿ ಬಳಿ ಸಿದ್ದರಾಮಯ್ಯ, ಯಡಿಯೂರಪ್ಪ ಅವರ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಜೀವನವೆಲ್ಲಾ ಹೋರಾಟ ಎಂದು ಕಳೆದಿದ್ದಾರೆ. ಹೀಗಾಗಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಡಾಕ್ಟರ್ ಹೇಳುವವರೆಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಿ ಎಂದು ಬಿಎಸ್ ವೈ ಪುತ್ರಿ ಪದ್ಮಾವತಿ ಅವರಿಗೆ ಹೇಳಿದ್ದಾರೆ.
ಬಳಿಕ ಸಿದ್ದರಾಮಯ್ಯ ಮಾತನಾಡಿಸಿದ ಬಗ್ಗೆ ಪದ್ಮಾವತಿ ಅವರು ತಂದೆ ಬಿಎಸ್ ವೈ ಬಳಿ ಹೇಳಿ ಖುಷಿ ಪಡಿಸಿದ್ದಾರೆ ಎಂದು ತಿಳಿದುಬಂದಿದೆ.
- Advertisement -