ಬೆಂಗಳೂರು: ಜೊಮ್ಯಾಟೋ ಡೆಲಿವರಿ ಬಾಯ್ ಮೇಲೆ ಹಲ್ಲೆ ಆರೋಪ ಮಾಡಿದ್ದ ಹಿತೇಶಾ ಚಂದ್ರಾನಿ ವಿರುದ್ದ ಎಫ್‌ಐಆರ್ ದಾಖಲು ಆಗುತ್ತಿದ್ದ ಹಾಗೇ ಬೆಂಗಳೂರು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಜೋಮೋಟೋ ಡೆಲಿವರಿ ಬಾಯ್ ಕಾಮರಾಜ್ ಸೋಮವಾರ ಆಕೆಯ ವಿರುದ್ಧ ಪ್ರತಿ-ದೂರು ದಾಖಲಿಸಿದ ನಂತರ ಪೊಲೀಸರು ಆಪಾದಿತ ಸಂತ್ರಸ್ತೆ ಹಿತೇಶಾ ಚಂದ್ರಾನಿಯನ್ನು ವಿಚಾರಣೆಗಾಗಿ ಸಂಪರ್ಕಿಸಿದಾಗ ಇದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಡೆಲಿವರಿ ಬಾಯ್ ಕಾಮರಾಜ್ ಅವರ ವಿರುದ್ದ ಹಿತೇಶಾ ಚಂದ್ರಾನಿ ‘ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಅಂತ ದೂರು ನೀಡಿದ್ದರು, ಇದು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೇ ವೇಳೆ ದೂರಿನ ಸಂಬಂಧ ಡೆಲಿವರಿ ಬಾಯ್ ಕಾಮರಾಜ್ ಅವರು ಪೊಲೀಸರ ಮುಂದೆ ನಡೆದ ಘಟನೆಯನ್ನು ತಿಳಿಸಿದ್ದಾರೆ.

ಇದಲ್ಲದೇ ಅನೇಕ ಮಂದಿ ಡೆಲಿವರಿ ಬಾಯ್ ಕಾಮರಾಜ್ ಅವರ ಪರವಾಗಿ ಮಾತನಾಡಿ, ಅವರಿಗೆ ನ್ಯಾಯಾ ಒದಗಿಸಬೇಕು, ಜೊತೆಗೆ ಪ್ರಕರಣ ತನಿಖೆ ಸರಿಯಾಗಿ ಆಗಬೇಕು ಅಂತ ಒತ್ತಾಯಿಸಿದ್ದರು. ಇದರ ಬೆನಲ್ಲೇ ಕಾಮರಾಜ್ ಅವರ ಪರವಾಗಿ ನಿಂತ ಕನ್ನಡ ಪರ ಸಂಘಟನೆಗಳೂ ಘಟನೆ ಸತ್ಯ ಹೊರ ಬರಬೇಕು ಅಂತ ಹಿತೇಶಾ ಚಂದ್ರಾನಿ ವಿರುದ್ದ ದೂರು ನೀಡಿದ್ದರು.

ಇದೇ ವೇಳೆ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು, ‘ಕಾಮರಾಜ್ ತನ್ನ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ ನಂತರ, ನಾವು ವಿಚಾರಣೆಗೆ ಸಂಬಂಧಿಸಿದಂತೆ ಹಿತೇಶಾ ಚಂದ್ರಾನಿಯನ್ನು ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ಕರೆದೆವು. ಆದರೆ ಅವರು ಬೆಂಗಳೂರು ನಗರವನ್ನು ಬಿಟ್ಟು ಮಹಾರಾಷ್ಟ್ರದ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದಾಳೆ ಅಂತ ಆಕೆ ಹೇಳಿದ್ದಾರೆ.
