Sunday, July 26, 2026
spot_imgspot_img
spot_imgspot_img

ವಿಠ್ಠಲ್ ಜೇಸಿ ಶಾಲೆ :ಜೇಸಿ ವಲಯ ಅಧ್ಯಕ್ಷರ ಭೇಟಿ

- Advertisement -
- Advertisement -

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಸಂಸ್ಥೆಯ ಬೋಧಕ ಸಮೂಹದ ಪ್ರಯತ್ನ ಮುಂಚೂಣಿಯಲ್ಲಿರುವುದು. ಈ ದೆಸೆಯಲ್ಲಿ ಜೇಸಿ ಸಂಸ್ಥೆ ಹೆಸರಲ್ಲಿ ನಡೆಯುವ ವಿದ್ಯಾಸಂಸ್ಥೆಯಲ್ಲೊಂದಾದ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಶೈಕ್ಷಣಿಕ ಪ್ರಗತಿಯು ಉನ್ನತವಾದುದು ಎಂದು JCI ಇಂಡಿಯಾದ Zone President, JCI ಕಾರ್ತಿಕೇಯ ಮಧ್ಯಸ್ಥ ರವರು ಶಾಲೆಗೆ ಭೇಟಿಯಿತ್ತ ಸಂದರ್ಭದಲ್ಲಿ ಶ್ಲಾಘಿಸಿದರು.

ವಿಟ್ಲ ಜೇಸಿ ಸಂಸ್ಥೆಯ ವಾರ್ಷಿಕ ಭೇಟಿಯ ನಿಮಿತ್ತ,ಏರ್ಪಡಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ರಿ ಶಾಲೆಗೆ ಸ್ಯಾನಿಟೈಜರ್ ಸ್ಟ್ಯಾಂಡನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ zone vice -president JFP.ಪ್ರದೀಪ್ ಬಾಕಿಲ, JCI ವಿಟ್ಲದ ಅಧ್ಯಕ್ಷ JFM ದಿನೇಶ್ ಶೆಟ್ಟಿ, JCI. Sen ಬಾಲಕೃಷ್ಣ, JCI.ಬಾಬು ಕೆ, JFM. ಆರ್ಥಿಕ್. ಪಿ, JC. ಅಶ್ವಿನ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಾಲಾ ಪ್ರಾಂಶುಪಾಲರಾದ ಜಯರಾಮ್ ರೈ ಯವರು ಶಾಲಾ ಬೆಳವಣಿಗೆಯ ಬಗೆಗೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ರವರು ವಿಟ್ಲದ ಎಲ್ಲಾ ಸಾಮಾಜಿಕ ಸಂಸ್ಥೆಗಳಾದ ಜೇಸಿ, ರೋಟರಿ ಹಾಗೂ ಲಯನ್ಸ್ ಸಂಸ್ಥೆಗಳು ಶಾಲಾ ಅಭಿವೃದ್ಧಿಯಲ್ಲಿ ಸಹಕರಿಸುತ್ತಿವೆ ಹಾಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯತೆ ಇದೆ ಎಂದು ವಂದನಾರ್ಪಣೆ ಗೈದರು. ಶಾಲಾ ಶಿಕ್ಷಕ-ಶಿಕ್ಷಕೇತರರು ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.

- Advertisement -

Related news

error: Content is protected !!