Saturday, June 28, 2025
spot_imgspot_img
spot_imgspot_img

ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ , ಮಗುವನ್ನು ಚಾಕುವಿನಿಂದ ಚುಚ್ಚಿ ಕೊಂದ ಪಾಪಿ ಪತಿ!!

- Advertisement -
- Advertisement -

ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯನ್ನು ಪತಿಯು ಚಾಕುವಿನಿಂದ ಇರಿದು ಕೊಲೆ ಮಾಡಿ, ನಂತರ ಮಗುವನ್ನು ಚಾಕು ಚುಚ್ಚಿದ್ದ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕೋಲ್ಕತ್ತಾ ಮೂಲದ. ತಬ್ಸಂಬಿ ಹತ್ಯೆಯಾದ ಮಹಿಳೆ. ಶೇಕ್ ಸೋಹಿಲ್ ಬಂಧಿತ ಆರೋಪಿ.

ಶೇಕ್ ಸೋಹಿಲ್ ಜೊತೆ ತಬ್ಸಂಬಿಯಳ ಮದುವೆಯಾಗಿದ್ದು, ಐದಾರು ವರ್ಷಗಳ ಹಿಂದೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ನಯೀಮ್ ಎಂಬತನ ಸಂಪರ್ಕ ಬೆಳೆಸಿಕೊಂಡಿದ್ದ ಪತ್ನಿಯ ವಿಷಯ ಗೊತ್ತಾಗಿ ಪತಿಯು ಪತ್ನಿಯನ್ನ ಕರೆದುಕೊಂಡು ಕೋಲ್ಕತ್ತಾಗೆ ಮರಳಿದ್ದನು.

2 ವರ್ಷದ ಹಿಂದೆ ಪತ್ನಿ ಪತಿಯನ್ನು ಬಿಟ್ಟು ಬೆಂಗಳೂರಿಗೆ ಬಂದು ಮತ್ತೆ ನಯೀಮ್ ಜೊತೆ ವಾಸವಿದ್ದು, ಒಂದು ಮಗುವಾಗಿತ್ತು. ಈ ವಿಚಾರ ಗೊತ್ತಾದ ಬಳಿಕ ಬೆಂಗಳೂರಿಗೆ ಶೇಕ್ ಸೋಹಿಲ್ ಮದ್ಯಪಾನ ಸೇವಿಸಿ ಬಂದಿದ್ದನು. ಮಗುವಾಗಿದ್ದ ಬಗ್ಗೆ ಪತ್ನಿಯನ್ನು ಪ್ರಶ್ನಿಸಿ ಜಗಳ ತೆಗೆದಿದ್ದು, ಈ ವೇಳೆ ಜಗಳ ತಾರಕಕ್ಕೇರಿದ್ದು ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಮಗುವಿಗು ಚಾಕು ಇರಿದಿದ್ದಾನೆ. ಗಾಯಗೊಂಡಿರುವ ಮಗುವನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮಾಹಿತಿ ಮೂಲಗಳು ತಿಳಿಸಿದೆ.

- Advertisement -

Related news

error: Content is protected !!