

ಉಜಿರೆ: ಉಡುಪಿಯೊಂದರ ಮಾರುತಿ ಶೋರೂಂ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ , ಉಜಿರೆ ಗ್ರಾಮದ ಎರ್ನೋಡಿ ರೆಂಜಾಳದ ಯುವತಿ ಕಾಣೆಯಾಗಿದ್ದ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ. ಯುವತಿ ಎ.18 ರಂದು ಸಂಜೆ ವೇಳೆ ಮನೆಗೆ ವಾಪಾಸ್ಸಾಗಿದ್ದು ತನ್ನ ವೈಯಕ್ತಿಕ ಕಾರಣಗಳಿಂದ ಮನನೊಂದು ಉಡುಪಿಯ ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾಳೆ.
ಉಡುಪಿಯ ಮಾರುತಿ ಶೋರೂಂವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ವರ್ಕ್ ಫ್ರಮ್ ಹೋಮ್ ಎಂದು ಮನೆಯಲ್ಲಿ ಕೆಲಸ ಮಾಡಿಕೊಂಡು 15 ದಿನಗಳಿಗೊಮ್ಮೆ ಉಡುಪಿಗೆ ಹೋಗಿ ಬರುತ್ತಿದ್ದಳು. ಎ. 11 ರಂದು ಬೆಳಿಗ್ಗೆ 8.30ರ ಸುಮಾರಿಗೆ ಉಡುಪಿಗೆಂದು ಮನೆಯಿಂದ ಹೋದವಳು ಬಜಗೊಳಿಯ ತನ್ನ ಚಿಕ್ಕಮ್ಮನ ಮನೆಯಲ್ಲಿ 3-4 ದಿನ ಉಳಿದುಕೊಂಡಿದ್ದಳು.
ಎ.15ರಂದು ಬೆಳಿಗ್ಗೆ ಸುಮಾರು 7.30ಕ್ಕೆ ಬಜಗೊಳಿಯ ತನ್ನ ಚಿಕ್ಕಮ್ಮನ ಮನೆಯಿಂದ ಕುಂದಾಪುರಕ್ಕೆ ಹೋಗುತ್ತೇನೆಂದು ಹೇಳಿ ಹೋಗಿರುತ್ತಾರೆ. ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಫೋನ್ ಕರೆಗೂ ಸಿಗದೇ ಸ್ವಿಚ್ ಆಫ್ ಆಗಿದೆ. ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಾಣದೆ ಇರುವುದರಿಂದ ಯುವತಿಯ ತಂದೆ ಕಾಣೆಯಾಗಿದ್ದಾಳೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಇದೀಗ ಯುವತಿ ಮನೆಗೆ ವಾಪಾಸ್ಸಾಗಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

