Saturday, July 5, 2025
spot_imgspot_img
spot_imgspot_img

ಉಡುಪಿ: ಕಾಲುಸಂಕದಿಂದ ಜಾರಿ ಬಿದ್ದು ನಾಪತ್ತೆಯಾಗಿದ್ದ ಬಾಲಕಿ ಮೃತದೇಹ ಪತ್ತೆ….!!

- Advertisement -
- Advertisement -

ಉಡುಪಿ: ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ ಬಿದ್ದು ನೀರು ಪಾಲಾಗಿದ್ದ ವಿದ್ಯಾರ್ಥಿನಿ ಸನ್ನಿಧಿಯ ಮೃತದೇಹ ಕೊನೆಗೂ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಿಂದ 300 ಮೀಟರ್ ದೂರದಲ್ಲಿ ಸನ್ನಿಧಿ ಶವ ಪತ್ತೆಯಾಗಿದೆ.

ಚಪ್ಪರಿಕೆಯ 2ನೇ ತರಗತಿಯ ವಿದ್ಯಾರ್ಥಿನಿ ಸನ್ನಿಧಿ (7) ಸೋಮವಾರ ಸಂಜೆ ಶಾಲೆ ಬಿಟ್ಟು ಮನೆಗೆ ಬರುವಾಗ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಕಾಲು ಸಂಕ ದಾಟುವಾಗ ಆಯತಪ್ಪಿ ನದಿಗೆ ಬಿದ್ದಿದ್ದಳು. ಭಾರೀ ಮಳೆಯಿಂದಾಗಿ ನದಿಯ ನೀರಿನ ರಭಸದಿಂದಾಗಿ ಸನ್ನಿಧಿ ನಾಪತ್ತೆಯಾಗಿದ್ದಳು. ವಿಷಯ ತಿಳಿದು ಕೂಡಲೇ ಸಾರ್ವಜನಿಕರು ಹುಡುಕಾಟ ಆರಂಭಿಸಿದ್ದರು. ಆದರೆ ಎಷ್ಟೇ ಹುಡುಕಾಡಿದರೂ ಸನ್ನಿಧಿ ಪತ್ತೆಯಾಗಿರಲಿಲ್ಲ.

ಸ್ಥಳೀಯರು ಸೇರಿದಂತೆ ಅಗ್ನಿಶಾಮಕದಳದ ಸಿಬ್ಬಂದಿಗಳು ತೀವ್ರ ಹುಡುಕಾಟ ನಡೆಸಿದ್ದರು. ಇದೀಗ ಘಟನೆ ನಡೆದ ಸ್ಥಳದಿಂದ 300 ಮೀಟರ್ ದೂರದಲ್ಲಿ ಸನ್ನಿಧಿ ಶವ ಪತ್ತೆಯಾಗಿದೆ.

- Advertisement -

Related news

error: Content is protected !!