Friday, July 24, 2026
spot_imgspot_img
spot_imgspot_img

ಉಡುಪಿ: ಪತಿಯಿಂದ ವರದಕ್ಷಿಣೆ ಕಿರುಕುಳ, ದೈಹಿಕ ಹಿಂಸೆ, ಕೊಲೆ ಬೆದರಿಕೆ; ಪತ್ನಿಯಿಂದ ಪೊಲೀಸ್ ಠಾಣೆ ದೂರು..!

- Advertisement -
- Advertisement -

ಉಡುಪಿ: ವರದಕ್ಷಿಣೆ ನೀಡುವಂತೆ ದೈಹಿಕ ಹಿಂಸೆ ನೀಡಿ ಪತಿ ಕಿರುಕುಳ ನೀಡುತ್ತಿರುವುದಾಗಿ ಮಹಿಳೆಯೊಬ್ಬರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಕ್ಷಾ ಉಪದ್ಯಾಯ ಅವರು ಗೋವಿಂದರಾಜ್ ಅವರನ್ನು 2021 ರಲ್ಲಿ ವಿಹವಾಗಿದ್ದು, ಮದುವೆ ಸಂದರ್ಭದಲ್ಲಿ ಗೋವಿಂದರಾಜ್‌ಗೆ ವರದಕ್ಷಿಣೆಯಾಗಿ ಮೂರು ಲಕ್ಷ ರೂಪಾಯಿ ಹಾಗೂ 30 ಪವನ್ ಚಿನ್ನಾಭರಣ ನೀಡಲಾಗಿತ್ತು. ಇದಲ್ಲದೆ ರಕ್ಷಾಳ ಕುಟುಂಬವು ಮದುವೆಗೆ ಸಂಬಂಧಿಸಿದ ಎಲ್ಲಾ ವೆಚ್ಚವನ್ನು ಭರಿಸಿತ್ತು.

ಇನ್ನು ದಂಪತಿಳು ಗೋವಿಂದರಾಜ್ ಗೆ ಸೇರಿದ ಮನೆಯಲ್ಲಿ ವಾಸವಾಗಿದ್ದು, ಮದುವೆಯಾಗಿ ಸ್ವಲ್ಪ ಸಮಯದ ನಂತರ ಗೋವಿಂದರಾಜ್ ಹೆಚ್ಚಿನ ವರದಕ್ಷಿಣೆ ಮತ್ತು ಚಿನ್ನಕ್ಕೆ ಬೇಡಿಕೆಯಿಟ್ಟುದ್ದು, ಆಕೆ ಹಂತ ಹಂತವಾಗಿ ಆರೋಪಿಯ ಬ್ಯಾಂಕ್ ಖಾತೆಗೆ 1.90 ಲಕ್ಷ ರೂ.ಗಳನ್ನು ವರ್ಗಾಯಿಸಲಾಗಿದ್ದರೂ ಆಕೆಗೆ ದೈಹಿಕವಾಗಿ ಹಿಂದೆ ನೀಡಿ, ಅಶ್ಲೀಲ ಪದಗಳಿಂದ ನಿಂದಿಸಿ ಕೊಲೆ ಬೆದರಿಕೆ ಕೂಡ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!