Tuesday, July 1, 2025
spot_imgspot_img
spot_imgspot_img

ಉಪ್ಪಿನಂಗಡಿ: ಧ.ಗ್ರಾ.ಯೋ ಬಿ.ಸಿ ಟ್ರಸ್ಟ್ (ರಿ) ವಿಟ್ಲ ಇದರ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಸ್ವ- ಉದ್ಯೋಗ ತರಬೇತಿ

- Advertisement -
- Advertisement -

ಉಪ್ಪಿನಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಾರ್ಯಕ್ಷೇತ್ರ ವ್ಯಾಪ್ತಿಯ ಪೆರ್ನೆ ವಲಯದ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಸ್ವ- ಉದ್ಯೋಗ ತರಬೇತಿ ಕಾರ್ಯಕ್ರಮದ ಅಂಗವಾಗಿ 3 ತಿಂಗಳ ಟೈಲರಿಂಗ್ ತರಬೇತಿಯನ್ನು ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ , ಪ್ರಾರಂಭಿಸಲಾಯಿತು.

ಪೆರ್ನೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನವೀನ್ ಪದಬರಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಒಕ್ಕೂಟ ಅಧ್ಯಕ್ಷ ಯಶೋದಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಅಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾ ಅಧಿಕಾರಿ ಚೆನ್ನಪ್ಪ ಗೌಡರವರು ಸ್ವ – ಉದ್ಯೋಗ ತರಬೇತಿಯ ಬಗ್ಗೆ ಮಾಹಿತಿ ನೀಡಿದರು.

ತರಬೇತಿ ಶಿಕ್ಷಕಿ ಸುಗುಣ ಸದಾಶಿವ ಆಚಾರ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿ ಸೇವಾ ಪ್ರತಿನಿಧಿ ಪುರುಷೋತ್ತಮ್ ವಂದಿಸಿದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ, ಕಾರ್ಯಕ್ರಮ ನಿರೂಪಿಸಿದರು .ಸೇವಾ ಪ್ರತಿನಿಧಿಗಳಾದ ಜಯಶ್ರೀ,, ಶಶಿಕಲಾ, ಅಸ್ಮಿತ ,ದಿವ್ಯಶ್ರೀ ಸಹಕರಿಸಿದರು. ಉಪಸ್ಥಿತರಿದ್ದರು. 30 ಮಂದಿ ಮಹಿಳಾ ಸದಸ್ಯರು ತರಬೇತಿಗಾಗಿ ಭಾಗವಹಿಸಿದ್ದರು.

astr
- Advertisement -

Related news

error: Content is protected !!