Monday, June 30, 2025
spot_imgspot_img
spot_imgspot_img

ಉಳ್ಳಾಲ: ಬೇಸ್ತು ಬೀಳಿಸಿದ ಬಾಲಕನ ನಾಪತ್ತೆ ಪ್ರಕರಣ; ಅಜ್ಜಿ ಮನೆಯ ತೋಟದಲ್ಲಿ ಅಡಗಿ ಕೂತ ಬಾಲಕ

- Advertisement -
- Advertisement -

ಉಳ್ಳಾಲ : ಮನೆಯಿಂದ ಧಿಡೀರ್ ಕಾಣೆಯಾದ ಬಾಲಕ ಅಜ್ಜಿ ಮನೆಯ ತೋಟದಲ್ಲಿ ಅಡಗಿ ಕೂತ ಘಟನೆ ನಡೆದಿದೆ. ಉಳ್ಳಾಲ ಬೈಲು ಗಣೇಶನಗರದ ಬಾಲಕ ಸಿಟಿ ಬಸ್ಸು ಹತ್ತಿ ಪಾವೂರು ಗ್ರಾಮದ ಇನೋಳಿಯ ಮಜಿಕಟ್ಟ ಎಂಬಲ್ಲಿನ ತನ್ನ ಅಜ್ಜಿ ಮನೆಗೆ ತೆರಳಿ ಅಡಗಿ ಕೂತು ಪೋಷಕರನ್ನು ದಂಗಾಗಿಸಿದ್ದಾನೆ..!

ಉಳ್ಳಾಲ ಬೈಲು ಗಣೇಶನಗರದ ಬಾಡಿಗೆ ಮನೆ ನಿವಾಸಿಗಳಾದ ಜಿತನ್ ರೆಕ್ಕಿನ ಮತ್ತು ರೋಹಿತ ಬ್ರಾಕ್ಸ್ ದಂಪತಿಯ ಪುತ್ರ ರಿಯಾನ್ (9) ಇಂದು ಬೆಳಗ್ಗೆ ಸ್ನೇಹಿತರೊಂದಿಗೆ ತೊಕ್ಕೊಟ್ಟು ಚರ್ಚ್ ಗೆ ತೆರಳಿದ್ದಾನೆ. ಮಧ್ಯಾಹ್ನ ವಾಪಾಸಾಗಿದ್ದ ಆ ಬಳಿಕ ಪಕ್ಕದಲ್ಲೇ ಇರುವ ದೊಡ್ಡಮ್ಮನ ಮನೆಗೆ ತೆರಳಿದ್ದು ಅಲ್ಲಿದ್ದ ರಿಯಾನ್ ತಾಯಿ ಮನೆಯ ಕೀಲಿ ಕೈ ಕೊಟ್ಟು ರಿಯಾನಲ್ಲಿ ಮನೆಗೆ ಹೋಗಲು ಹೇಳಿದ್ದರು. ಆದರೆ 2 ಗಂಟೆ ಸುಮಾರಿಗೆ ತಾಯಿ ಮನೆಗೆ ತೆರಳಿದಾಗ ಕಿಟಕಿಯಲ್ಲಿ ಮನೆಯ ಕೀಲಿ ಕೈ ಮಾತ್ರ ಇದ್ದು ರಿಯಾನ್ ನಾಪತ್ತೆಯಾಗಿದ್ದ.

ಗಾಬರಿಗೊಂಡ ರಿಯಾನ್ ಪೋಷಕರು, ಸ್ಥಳೀಯರು ಶೋಧ ನಡೆಸಿದ್ದು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಶೋಧ ಕಾರ್ಯ ಆರಂಭಿಸಿದ್ದರು. ಇತ್ತ ಮನೆಮಂದಿ ರಿಯಾನ್ ಹುಡುಕಾಟದಲ್ಲಿ ತೊಡಗಿದ್ದರೆ, ಸಂಜೆ ಹೊತ್ತಲ್ಲಿ ಪಾವೂರು ಗ್ರಾಮದ ಇನೋಳಿಯ ಮಜಿಕಟ್ಟ ಎಂಬಲ್ಲಿ ತನ್ನ ಅಜ್ಜಿ ಮನೆಯ ತೋಟದಲ್ಲಿ ರಿಯಾನ್ ಪತ್ತೆಯಾಗಿದ್ದಾನೆ.

ಒಂಬತ್ತು ವರ್ಷದ ಹುಡುಗ ಒಬ್ಬಂಟಿಯಾಗಿಯೇ ತೊಕ್ಕೊಟ್ಟಿನಿಂದ ಸಿಟಿ ಬನ್ನೊಂದನ್ನ ಏರಿ ಇನೋಳಿಗೆ ತೆರಳಿದ್ದು ಅಲ್ಲಿನ ಮನೆಗೂ ಹೋಗದೆ ತೋಟದಲ್ಲಿ ಅಡಿಕೆ ಹೆಕ್ಕುತ್ತಿರುವಂತೆ ನಟಿಸಿದ್ದಾನೆ.

ಅಜ್ಜ, ಅಜ್ಜಿ ಸಾವನ್ನಪ್ಪಿದ್ದು ಮನೆಯಲ್ಲಿದ್ದ ಚಿಕ್ಕಮ್ಮನಿಗೆ ರಿಯಾನ್ ಬಂದ ವಿಚಾರ ತಡವಾಗಿ ತಿಳಿದುಬಂದಿತ್ತು. ರಿಯಾನ್ ನಾಪತ್ತೆ ಬಗ್ಗೆ ಜಾಲತಾಣದಲ್ಲಿ ಸಂದೇಶವನ್ನು ನೋಡಿದ ಚಿಕ್ಕಮ್ಮರಿಯಾನ್ ತಮ್ಮಲ್ಲಿ ಇರುವ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಸಂಜೆ ರಿಯಾನ್ ಮತ್ತೆ ನಗು, ನಗುತ್ತಾ ತಾಯಿ ಮನೆಗೆ ಮರಳಿದ್ದು ಪೋಷಕರು, ಸ್ಥಳೀಯರು ನೆಮ್ಮದಿಯ ನಗು ಬೀರಿದ್ದಾರೆ.

- Advertisement -

Related news

error: Content is protected !!