Saturday, July 5, 2025
spot_imgspot_img
spot_imgspot_img

ಎಲ್ ಪಿಜಿ ದರ ದಿಢೀರ್ ಏರಿಕೆ, ಆಟೋ ಚಾಲಕರಿಗೆ ಬರೆ..!

- Advertisement -
- Advertisement -

ಕೊರೊನಾ ಸಂಕಷ್ಟದ ನಡುವೆ ಆಟೋ ಎಲ್‌ಪಿಜಿ ಗ್ಯಾಸ್ ದರ ಏರಿಕೆಯಾಗಿದೆ. ಆಟೋ ಚಾಲಕರಿಗೆ ಬಿಗ್ ಶಾಕ್ ಹಾಗೂ ಬರೆ ಬಿದ್ದಿದೆ ಎನ್ನಬಹುದು. ಒಂದು ಕೆಜಿಗೆ 5ರೂ. 41 ಪೈಸೆ ಏರಿಕೆ ಮಾಡಲಾಗಿದೆ. ಏಕಾಏಕಿ ಈ ಪ್ರಮಾಣದ ದರ ಏರಿಕೆ ಕಂಡು ಆಟೋ ಚಾಲಕರು ದಂಗಾಗಿದ್ದಾರೆ. 50ರೂ.47 ಪೈಸೆ ಇದ್ದ ಆಟೋ ಗ್ಯಾಸ್ ಬೆಲೆ ಈಗ 55ರೂ. 88 ಪೈಸೆ ಆಗಿದೆ.

ಕೊರೊನಾ ಎರಡನೆ ಅಲೆಯಿಂದ ಆಟೋ ಚಾಲಕರು ಪರದಾಡುವಂತಾಗಿತ್ತು. ಆಟೋ ಬಾಡಿಗೆ ನಂಬಿ ಜೀವನ ಸಾಗಿಸುತ್ತಿದ್ದ ಚಾಲಕರಿಗೆ ಕೊರೊನಾ ಮಹಾಕಂಟಕವಾಗಿ ಪರಿಣಮಿಸಿತ್ತು.
ಮನೆಗಳಲ್ಲಿ ನಿಂತಿದ್ದ ಆಟೋಗಳು ಲಾಕ್‌ಡೌನ್ ತೆರವಾದ ನಂತರ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈಗ ಎಲ್‌ಪಿಜಿ ಗ್ಯಾಸ್ ದರ ಏರಿಕೆಯಿಂದ ಆಟೋ ಚಾಲಕರ ಬದುಕಿನ ಮೇಲೆ ಬರೆ ಬಿದ್ದಿದೆ.
ಪ್ರಯಾಣಿಕರ ಬಳಿ ಹೆಚ್ಚು ಹಣ ಕೇಳಿದರೆ ಕೊಡುವುದಿಲ್ಲ.

ನಾವೂ ಕಷ್ಟದಲ್ಲಿದ್ದೇವೆ. ಹೆಚ್ಚಿಗೆ ಹಣ ಕೊಡುವುದು ಎಲ್ಲಿಂದ ಎಂದು ಪ್ರಯಾಣಿಕರು ಹೇಳುತ್ತಾರೆ. ಈ ಪ್ರಮಾಣದಲ್ಲಿ ಗ್ಯಾಸ್ ದರ ಏರಿಸಿದರೆ ಯಾವ ರೀತಿ ಆಟೋಗಳನ್ನು ಓಡಿಸುವುದು ಎಂದು ಆಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ.

- Advertisement -

Related news

error: Content is protected !!