Tuesday, July 1, 2025
spot_imgspot_img
spot_imgspot_img

ಕಡಬ: ಮಂಗಳೂರಿಗೆ ಕೆಲಸಕ್ಕೆಂದು ಬಂದ ಪಶ್ಚಿಮ ಬಂಗಾಳದ ಯುವಕ ಆಲಂಕಾರಿನಲ್ಲಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಕಡಬ: ತಾಲೂಕಿನ ಆಲಂಕಾರು ಗ್ರಾಮದ ಕೇಪುಳು ಎಂಬಲ್ಲಿ ಪಶ್ಚಿಮ ಬಂಗಾಳ ಮೂಲದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವನನ್ನು ಪಶ್ಚಿಮ ಬಂಗಾಳ ದ ಗೋರಮಾರ್ ಜಿಲ್ಲೆಯ ಅಜೆರ್‌ಪರ್ ಗ್ರಾಮದ ಸುಶಾಂಕರ ಸರ್ಕಾರ್(22ವ) ಎಂದು ಗುರುತಿಸಲಾಗಿದೆ.

ಈತ ಮಂಗಳೂರಿಗೆ ಸೆಂಟ್ರಿಂಗ್ ಕೆಲಸಕ್ಕೆಂದು ಬಂದಿದ್ದು, ಆಲಂಕಾರಿಗೆ ಯಾವ ಕಾರಣಕ್ಕಾಗಿ ಬಂದಿದ್ದಾನೆ ಎಂಬ ವಿಚಾರ ಯಾರಿಗು ತಿಳಿದಿಲ್ಲವಾಗಿದೆ. ಸ್ಥಳೀಯರು ಕೆಲಸ ಮಾಡುವ ವೇಳೆ ಶವವನ್ನು ಗಮನಿಸಿದ್ದು ತಕ್ಷಣ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

vtv vitla
vtv vitla

ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿ ಶವವನ್ನು ಕಡಬ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ.ಮೃತರ ಸಹೋದ್ಯೋಗಿಗಳಿಗೆ ಮಾಹಿತಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದ್ದು ಸಾವಿನ ಕಾರಣ ನಿಗೂಢವಾಗಿದೆ.

- Advertisement -

Related news

error: Content is protected !!