Sunday, June 29, 2025
spot_imgspot_img
spot_imgspot_img

ಕಾಪು: ಓವರ್‌ಟೆಕ್‌ ಭರದಲ್ಲಿ ಡಿವೈಡರ್‌ ಮೇಲೇರಿದ ಬಸ್ಸು; ಪ್ರಯಾಣಿಕರಿಗೆ ಗಾಯ

- Advertisement -
- Advertisement -

ಕಾಪು: ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬಸ್ಸುಗಳ ಓವರ್‌ಟೇಕ್‌ ಭರದಲ್ಲಿ ಬಸ್ಸೊಂದು ಡಿವೈಡರ್ ಮೇಲೇರಿದ ಘಟನೆ ಉಚ್ಚಿಲ ಸಮೀಪದ ಮೂಲೂರು ವೆಸ್ಟ್‌ಕೋಸ್ಟ್ ನರ್ಸರಿ ಬಳಿ ನಡೆದಿದೆ.

ಒಂದೇ ಹೆಸರಿನ ಎರಡು ಬಸ್ಸುಗಳು ಉಡುಪಿಯಿಂದ ಮಂಗಳೂರಿನ ಕಡೆ ಬರುತ್ತಿದ್ದ ವೇಳೆ ಎರಡು ಬಸ್ಸುಗಳು ಓವರ್‌ಟೇಕ್‌ ಮಾಡಿದ್ದು ಒಂದು ಬಸ್ಸು ನಿಯಂತ್ರಣ ತಪ್ಪಿ ಮೂಳೂರು ಬಳಿ ಸರ್ವಿಸ್ ರಸ್ತೆಯ ಪಕ್ಕದ ಡಿವೈಡರ್ ಮೇಲೇರಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳಕ್ಕೆ ಕಾಪು ಪೋಲಿಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!