Friday, July 11, 2025
spot_imgspot_img
spot_imgspot_img

ಕಾಲಿವುಡ್ ಸ್ಟಾರ್ ಸೂರ್ಯನ ಮೇಲೆ ಹಲ್ಲೆ ಮಾಡಿದ್ರೆ 1 ಲಕ್ಷ ಬಹುಮಾನ.!?

- Advertisement -
- Advertisement -
vtv vitla
vtv vitla

ಕಾಲಿವುಡ್ ನಟ ಸೂರ್ಯ ಅಭಿನಯದ ಜೈ ಭೀಮ್ ಚಿತ್ರ ವಿವಾದಕ್ಕೆ ಕಾರಣವಾಗಿದ್ದು, ಈ ನಡುವೆ ಕಿಡಿಗೇಡಿಗಳು ನಟ ಸೂರ್ಯನ ಮೇಲೆ ಹಲ್ಲೆ ನಡೆಸಿದರೆ 1 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿಸಿದ್ದಾರೆ.

ಸೂರ್ಯ ಅಭಿನಯದ ಜೈ ಭೀಮ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಧೂಳೆಬ್ಬಿಸಿದೆ. ಓಟಿಟಿ ಇತಿಹಾಸದಲ್ಲಿಯೇ ಗರಿಷ್ಠ ಅಂಕ ಪಡೆದು ವೀಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಬುಡಕಟ್ಟು ಜನಾಂಗದ ಮೇಲೆ ನಡೆದ ದೌರ್ಜನ್ಯ, ಕ್ರೌರ್ಯದ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಇದೀಗ ವಿವಾದದ ಮೇಲೆ ವಿವಾದಕ್ಕೆ ಕಾರಣವಾಗಿದೆ.

ವನ್ನಿಯಾರ್ ಜಾತಿಯ ಜನರನ್ನು ಅಪಮಾನಿಸಲಾಗಿದೆ ಎಂದು ಆರೋಪಗಳು ಕೇಳಿ ಬಂದಿದ್ದು, ನಟ ಸೂರ್ಯನ ಮೇಲೆ ಹಲ್ಲೆ ನಡೆಸಿದರೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಕಿಡಿಗೇಡಿಗಳು ಘೋಷಿಸಿದ್ದಾರೆ. ಅಲ್ಲದೇ ಇನ್ಮುಂದೆ ಮೈಲಾಡುತುರೈ ಜಿಲ್ಲೆಯಲ್ಲಿ ಸೂರ್ಯನ ಯಾವುದೇ ಚಿತ್ರ ಪ್ರದರ್ಶನಗೊಳ್ಳವಂತಿಲ್ಲ ಎಂದು ಎಚ್ಚರಿಸಿದ್ದಾರೆ.

ಚಿತ್ರದಲ್ಲಿ ವನ್ನಿಯರ್ ಜನಾಂಗದ ಕಾಡುವೆಟ್ಟಿ ಗುರು ಅವರನ್ನು ಅಪಮಾನಿಸಲಾಗಿದೆ. ಅವರನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಚಿತ್ರತಂಡದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಿಎಂಕೆ ಪಕ್ಷದ ಕಾರ್ಯಕರ್ತರು, ಮುಖಂಡರು ಮೈಲಾಡುತುರೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!