Tuesday, July 1, 2025
spot_imgspot_img
spot_imgspot_img

ಕೈಕೊಟ್ಟ ಪ್ರೇಯಸಿ ಹೆಸರಲ್ಲಿ ಟೀ ಸ್ಟಾಲ್; ಪ್ರೀತಿಯಲ್ಲಿ ಮೋಸ ಹೋದವರಿಗೆ 5 ರೂ.ಗೆ ಚಹಾ..!

- Advertisement -
- Advertisement -

ಕೈಕೊಟ್ಟ ಪ್ರಿಯತಮೆಯನ್ನು ಅಣಕಿಸಲು ಅವಳದೇ ಹೆಸರಿನ ಚಹಾದಂಗಡಿಯನ್ನು ತೆರೆದು ಇಲ್ಲೊಬ್ಬ ವ್ಯಕ್ತಿ ಸುದ್ದಿಯಾಗಿದ್ದಾನೆ. ಅಷ್ಟಕ್ಕೂ ಇಲ್ಲಿ ಪ್ರೇಯಸಿಯಿಂದ ಮೋಸ ಹೋದವರಿಗೆ ಕಡಿಮೆ ಬೆಲೆಯಲ್ಲಿ ಚಹಾ ನೀಡಲಾಗುತ್ತದೆ.

ಮಧ್ಯಪ್ರದೇಶದ ರಾಜಗಢ ಮೂಲದ ಅಂತರ್ ಗುಜ್ಜರ್ ಎಂಬ ಯುವಕನೇ ಕೈಕೊಟ್ಟ ತನ್ನ ಪ್ರಿಯತಮೆಯ ಹೆಸರಿನಲ್ಲಿ ಚಹಾದಂಗಡಿ ತೆರೆದವರು. “ಎಂ ಬೇವಾಫಾ ಚಾಯಿವಾಲಾ” ಎಂಬುದಾಗಿ ಆತ ತನ್ನ ಚಹಾದಂಗಡಿಗೆ ಹೆಸರಿಟ್ಟಿದ್ದಾನೆ. ಎಂ ಎಂದರೆ ಅಂತರ್‌ನ ಪ್ರೇಯಸಿಯ ಹೆಸರಿನ ಮೊದಲ ಅಕ್ಷರ.

ಈ ಚಹಾದಂಗಡಿಯಲ್ಲಿ ಜೋಡಿಗಳಿಗೆ ಒಂದು ಕಪ್‌ ಚಹಾ ಬೆಲೆ 10 ರೂ.ಗಳಾದರೆ, ಪ್ರೇಯಸಿಯಿಂದ ಮೋಸ ಹೋದವರಿಗೆ 5 ರೂ.ಗಳಿಗೆ ಒಂದು ಕಪ್ ಚಹಾ ನೀಡಲಾಗುತ್ತದೆ. ಉಳಿದ ಜನರಿಗೆ ಬೇರೆಯೇ ಬೆಲೆ ನಿಗದಿ ಮಾಡಲಾಗಿದೆ.

ಸದ್ಯ ಅಂತರ್‍ ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. ಕಳೆದೈದು ವರ್ಷದ ಹಿಂದೆ ಸಂಬಂಧಿಕರ ಮದುವೆಯಲ್ಲಿ ನಾನು ಆಕೆಯನ್ನು ಭೇಟಿಯಾಗಿದ್ದೆ. ಬಳಿಕ ಸ್ನೇಹಿತರಾಗಿ ಪ್ರೀತಿಸಲಾರಂಭಿಸಿದೆವು. ಆದರೆ ಎರಡು ವರ್ಷ ಕಳೆದ ಬಳಿಕ ಆಕೆ ನನ್ನನ್ನು ಬಿಟ್ಟು ಬೀರೊಬ್ಬನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಳು. ಅವಳ ಗಂಡನ ಬಳಿ ಎಲ್ಲವೂ ಇದೆ, ನಾನು ಅವಳನ್ನು ನಂಬಿ ನಿರುದ್ಯೋಗಿಯಾಗಿ ಉಳಿಯುವಂತಾಯಿತು. ಜೀವನವೇ ಬೇಡ ಎಂಬಂತಿದ್ದ ನನಗೆ ಸ್ನೇಹಿತ ಸಲಹೆ ನೀಡಿದ ಮೇರೆಗೆ ಆಕೆಯನ್ನು ಅಣಕಿಸುವಂತೆ ಚಹಾದಂಗಡಿ ತೆರೆದು ಆಕೆಯ ಹೆಸರಿಟ್ಟಿದ್ದೇನೆ ಎನ್ನುತ್ತಾನೆ ಅಂತರ್.

- Advertisement -

Related news

error: Content is protected !!