Saturday, June 28, 2025
spot_imgspot_img
spot_imgspot_img

ಕ್ರಿಕೆಟ್‌ ಕ್ರೀಡಾಂಗಣದಲ್ಲಿ ದೈವದ ವೇಷ ಧರಿಸಿದ ಅಭಿಮಾನಿ; ತೀವ್ರ ಆಕ್ರೋಶ

- Advertisement -
- Advertisement -

ನಿನ್ನೆ ನಡೆದ ಕ್ರಿಕೆಟ್‌ ಪಂದ್ಯಾಟದಲ್ಲಿ ಆರ್‌ಸಿಬಿ ಫ್ಯಾನ್‌ಯೋರ್ವರು ಪಂಜುರ್ಲಿ ದೈವದ ವೇಷ-ಭೂಷಣ ಧರಿಸಿಕೊಂಡು ಪಂದ್ಯ ನೋಡುತ್ತಾ ಎಂಜಾಯ್ ಮಾಡುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ. ಈ ಫೋಟೋವನ್ನು ಆರ್‌ಸಿಬಿ ಟ್ವಿಟ್ಟರ್ ಖಾತೆಯೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಅನೇಕರು ಆರ್‌ಸಿಬಿ ಪಂದ್ಯದ ವೇಳೆ ಪಂಜುರ್ಲಿ ದೈವದ ವೇಷ ಧರಿಸಿರುವ ವ್ಯಕ್ತಿಯನ್ನು ಕಂಡು ಕಾಂತಾರವೆಂದು ಹೊಗಳಿದರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಡೆದ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ ನಡುವಿನ ಕಾಳಗದಲ್ಲಿ ಫಾಪ್ ಡು ಪ್ಲೆಸೀಸ್ ನಾಯಕತ್ವದ ತಂಡದ ಶಕ್ತಿ ಪ್ರದರ್ಶನ ಮಾತ್ರ ಎಲ್ಲರನ್ನು ಕಣ್ಣುಕಟ್ಟಿಸಿತ್ತು. ಕೊಹ್ಲಿ ಅಬ್ಬರ ಬ್ಯಾಟಿಂಗ್, ನಾಯಕನ ಡು ಪ್ಲೆಸಿಸ್ ಕರಾಮತ್ತು ತಂಡವನ್ನು ಜಯದ ನೆರಳಿಗೆ ತಂದುಬಿಟ್ಟಿತು. ಈ ಪಂದ್ಯವನ್ನಂತೂ ಕನ್ನಡಿಗರು ಎಂಜಾಯ್ ಮಾಡುತ್ತಾ ಕಂಡಿದ್ದಾರೆ. ಮೊದಲ ಪಂದ್ಯದಲ್ಲೇ 8 ವಿಕೆಟ್‌ಗಳ ಅದ್ಭುತ ಜಯವನ್ನಂತೂ ಕನ್ನಡಿಗರು ಮರೆಯುವಂತಿಲ್ಲ.

- Advertisement -

Related news

error: Content is protected !!