
ಕ್ಲಬ್ ಹೌಸ್ ನ ಚರ್ಚೆಯೊಂದರಲ್ಲಿ ಬ್ರಾಹ್ಮಣರ ನರಮೇಧಕ್ಕೆ ಬಹಿರಂಗವಾಗಿ ಕರೆ ಕೊಟ್ಟಿರುವ ಘಟನೆ ನಡೆದಿದೆ.
ಅಡವಯ್ಯ ಮಠಪತಿ ಮತ್ತು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಅಮಿತ್ ಗಿರೀಶ್ ಎಂಬ ಇಬ್ಬರು ಬೆಂಗಳೂರಿನ ನಿವಾಸಿಗಳು ಕ್ಲಬ್ ಹೌಸ್ ಚರ್ಚೆಯೊಂದರಲ್ಲಿ ಬ್ರಾಹ್ಮಣರ ನರಮೇಧಕ್ಕೆ ಬಹಿರಂಗವಾಗಿ ಕರೆ ಕೊಟ್ಟಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ. ಇವರಿಗೆ ಯಾಕಿಷ್ಟು ಬ್ರಾಹ್ಮಣ ದ್ವೇಷ ಎಂಬುದು ಇಲ್ಲಿ ದೊಡ್ಡ ಪ್ರಶ್ನೆ.
ಯಾವುದೇ ಅರಸೊತ್ತಿಗೆ ಇಲ್ಲದೆ, ಯಾರ ಸುದ್ದಿಗೂ ಇಲ್ಲದೆ, ಯಾವ ಸರಕಾರಿ ಸವಲತ್ತು ಪಡೆಯದೆ ಅವರೇ ಹೇಳಿರುವಂತೆ ಕೇವಲ 2% ಇರುವ ಬ್ರಾಹ್ಮಣರ ಮೂಲ ನಾಶದ ಈ ಹೇಳಿಕೆಯ ಹಿಂದೆ ಯಾವ ಜಿಹಾದಿಗಳ, ಯಾವ ಕಮ್ಯುನಿಸ್ಟ್ ಫ್ಯಾಸಿಸ್ಟ್ ಶಕ್ತಿಗಳ ಕುಮ್ಮಕ್ಕಿದೆಯೋ ಎಂಬುದು ಬ್ರಾಹ್ಮಣ ಸಮಾಜದ ಪ್ರಶ್ನೆಯಾಗಿದೆ.

ಸಮಸ್ತ ವಿಪ್ರ ಬಾಂಧವರು ಈ ಬೆಂಗಳೂರು ನಿವಾಸಿಗಳ ಮೇಲೆ ತುರ್ತಾಗಿ ಪೋಲೀಸ್ ಕಂಪ್ಲೇಂಟ್ ಕೊಟ್ಟು ಇವರ ಹಿಂದಿರುವ ಬ್ರಾಹ್ಮಣ ದ್ವೇಷಿ ಹಾಗೂ ಬ್ರಾಹ್ಮಣರ ನರಮೇಧ ಬಯಸುತ್ತಿರುವ ಸಮಾಜಘಾತುಕ ಶಕ್ತಿಗಳ ಷಡ್ಯಂತ್ರವನ್ನು ಬಯಲಿಗೆಳೆಯಲು ಈ ಕೂಡಲೇ ಪೋಲೀಸರಿಗೆ ಒತ್ತಾಯಿಸಬೇಕು.
ಅತ್ಯಂತ ಕ್ಷಿಪ್ರವಾಗಿ ಪೋಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ದಾಖಲು ಗೊಂಡು ಇವರೀರ್ವರ ಬಗ್ಗೆ ಶೀಘ್ರವಾಗಿ ತನಿಖೆ ಆಗಿ ಇವರ ಹಿಂದಿರುವ ಜಿಹಾದಿ ಮತ್ತು ಫ್ಯಾಸಿಸ್ಟ್ ಕಮ್ಯುನಿಸ್ಟ್ ಶಕ್ತಿಗಳ ಟೂಲ್ ಕಿಟ್ ಬಹಿರಂಗಗೊಂಡು ಸರಕಾರ ಉಗ್ರ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕ ವಲಯದಿಂದ ಒತ್ತಡ ಕೇಳಿ ಬಂದಿದೆ.

ಸ್ವತಃ ಬ್ರಾಹ್ಮಣನಾದ ಅಮಿತ್ ಗಿರೀಶ್ ಕೂಡ ತನ್ನ ರಾಜಕೀಯ ದುರುದ್ದೇಶದಿಂದ ‘ಬ್ರಾಹ್ಮಣರು ಆರ್ ಎಸ್ ಎಸ್, ಬಿಜೆಪಿ ಬೆಂಬಲಿಸುತ್ತಾರೆ’ ಎಂದು ಹೇಳಿಕೆ ಕೊಡುತ್ತಾ ಸಮಾಜಘಾತುಕ ಜಿಹಾದಿ ಶಕ್ತಿಗಳ ಮುಖವಾಣಿಯಾಗಿ ಕುಕೃತ್ಯ ಮೆರೆಯುತ್ತಿರುವುದು ನಿಜವಾಗಿಯೂ ಬ್ರಾಹ್ಮಣ ಸಮಾಜಕ್ಕೆ ಖೇದಕರ ಸಂಗತಿಯಾಗಿದೆ.
ಇದೇ ಅಮಿತ್ ಗಿರೀಶ್ ಇತ್ತೀಚೆಗೆ ಬ್ರಾಹ್ಮಣ ಸಮುದಾಯದ ಮಹಿಳೆಯೊಬ್ಬರ(ಖ್ಯಾತ ಗಾಯಕಿ) ಮೇಲೆ ಅನಗತ್ಯವಾಗಿ ವೈಯಕ್ತಿಕ ನಿಂದನೆಗಳನ್ನು ಮಾಡುತ್ತಾ ಅವರ ವೈಯಕ್ತಿಕ ಬದುಕನ್ನು ಸಾಮಾಜಿಕಗೊಳಿಸಿ ಅವರ ತೇಜೋವಧೆ ಮಾಡಿರುತ್ತಾನೆ. ಹೀಗಾಗಿ ಇವರಿಬ್ಬರ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಮುಂದಾಗುವಂತೆ ಸಮಾಜ ಬಾಂಧವರು ಹಾಗೂ ಎಲ್ಲಾ ಹಿಂದೂ ಬಾಂಧವರಲ್ಲಿ ವಿನಂತಿ ಮಾಡಿಕೊಂಡಿರುವ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.
