Sunday, July 6, 2025
spot_imgspot_img
spot_imgspot_img

ಕ್ಷುದ್ರಗ್ರಹವನ್ನೇ ಕ್ರ್ಯಾಶ್ ಮಾಡಿ ದಾರಿ ತಪ್ಪಿಸಲು ಹೊರಟಿದೆ ನಾಸಾ; ವಿಜ್ಞಾನದ ಅಗಾಧ ಶಕ್ತಿಯ ಅನಾವರಣ..!

- Advertisement -
- Advertisement -

ನೀವು 1998ರ ಹಾಲಿವುಡ್ ಬ್ಲಾಕ್‌ಬಸ್ಟರ್‌ ಚಿತ್ರ “ಆರ್ಮಗೆಡ್ಡಾನ್” (Armageddon) ಅನ್ನು ನೀವು ನೋಡಿದ್ದೀರಾ..? ಈ ಚಿತ್ರದಲ್ಲಿ ಚಿತ್ರ ನಟರಾದ ಬ್ರೂಸ್ ವಿಲ್ಲೀಸ್ ಜತೆಗೂಡಿ ಬೆನ್ ಅಫ್ಲೆಕ್ ಕ್ಷುದ್ರಗ್ರಹದಿಂದ ಭೂಮಿಯನ್ನು ರಕ್ಷಿಸಲು ಸಾಹಸ ಮಾಡಿದ್ದಾರೆ. ಈಗ ಹಾಲಿವುಡ್‌ ಚಿತ್ರದ ಮಾದರಿಯಲ್ಲೇ ನಾಸಾ ಪರೀಕ್ಷೆಗೆ ಮುಂದಾಗಿದೆ. ಭೂಮಿಯು ಅಂತಹ ತಕ್ಷಣದ ಅಪಾಯ ಎದುರಿಸದಿದ್ದರೂ, ಗ್ರಹಗಳ ರಕ್ಷಣೆಯ ಪರೀಕ್ಷೆಯಲ್ಲಿ ಮುಂದಿನ ವರ್ಷ ಕ್ಷುದ್ರಗ್ರಹಕ್ಕೆ ಗಂಟೆಗೆ 15,000 ಮೈಲುಗಳಷ್ಟು (24,000 ಕಿಮೀ) ವೇಗದಲ್ಲಿ ಭೂಮಿಯತ್ತ ಚಲಿಸುವ ಬಾಹ್ಯಾಕಾಶ ನೌಕೆಯನ್ನು ಕ್ರ್ಯಾಶ್‌ ಮಾಡಲು NASA ಯೋಜಿಸಿದೆ. ಆ ಬಗ್ಗೆ ನೀಲ ನಕ್ಷೆ ಈಗ ಸಿದ್ದ. ಭೂಮಿ ತಾಯಿಯತ್ತ ಯಾರೇ ಬಂದರೂ ಮಾಡರ್ನ್ ಸೈನ್ಸ್ ಬಿಡಲ್ಲ !! ದಾರಿಮದ್ಯದಲ್ಲೆ ದಾರಿ ತಪ್ಪಿಸಿ ಕಾಲಿಡುವ ಕಲೆ ಕಂ ಸೈನ್ಸ್ ಈ ಯುಗದ ವಿಜ್ಞಾನಿಗಳ ಕೋಟಿನೊಳಗೆ ಈಗಾಗಲೇ ಇದೆ.

ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ (The Double Asteroid Redirection Test) (DART) ಭವಿಷ್ಯದಲ್ಲಿ ಭೂಮಿಗೆ ಬೆದರಿಕೆಯೊಡ್ಡುವ ಕ್ಷುದ್ರಗ್ರಹದ ಹಾದಿಯನ್ನು ತಿರುಗಿಸಲು ಇದು ಪರಿಣಾಮಕಾರಿ ಮಾರ್ಗವಾಗಿದೆಯೇ ಎಂದು ನಿರ್ಧರಿಸುತ್ತದೆ. ಅಲ್ಲದೆ, ಈ ಪರೀಕ್ಷೆಗೆ 330 ಮಿಲಿಯನ್ ಡಾಲರ್‌ ಖರ್ಚಿನಲ್ಲಿ DART ಮಿಷನ್‌ ಕೆಲಸ ಮಾಡುತ್ತಿವೆ. ಭೂಮಿಯ ಮೇಲೆ ಪ್ರಭಾವ ಬೀರುವ ಹಾದಿಯಲ್ಲಿರುವ ಕ್ಷುದ್ರಗ್ರಹಗಳ ಬಗ್ಗೆ ಪ್ರಸ್ತುತ ನಮಗೆ ತಿಳಿದಿಲ್ಲವಾದರೂ, ಭೂಮಿಯ ಸಮೀಪವಿರುವ ಕ್ಷುದ್ರಗ್ರಹಗಳ ದೊಡ್ಡ ಜನಸಂಖ್ಯೆಯು ಇದೆ ಎಂದು ನಮಗೆ ತಿಳಿದಿದೆ” ಎಂದು ನಾಸಾದ ಪ್ಲಾನೆಟರಿ ಡಿಫೆನ್ಸ್ ಅಧಿಕಾರಿ ಲಿಂಡ್ಲಿ ಜಾನ್ಸನ್ ಹೇಳಿದ್ದಾರೆ. “ಗ್ರಹಗಳ ರಕ್ಷಣೆಯ ಪ್ರಮುಖ ಅಂಶವೆಂದರೆ, ಅದು ಭೂಮಿಗೆ ಪ್ರಭಾವ ಬೀರುವ ಬೆದರಿಕೆಗೆ ಮುಂಚೆಯೇ ಅವುಗಳನ್ನು ಕಂಡುಹಿಡಿಯುವುದು” ಎಂದು ಜಾನ್ಸನ್ ಮಾಹಿತಿ ನೀಡಿದ್ದಾರೆ.

‘’ಕ್ಷುದ್ರಗ್ರಹವು ಭೂಮಿಯ ಕಡೆಗೆ ಹೋದ ನಂತರ ಈ ಸಾಮರ್ಥ್ಯ ಪರೀಕ್ಷಿಸಬೇಕಾದಂತಹ ಪರಿಸ್ಥಿತಿಯಲ್ಲಿರಲು ನಾವು ಬಯಸುವುದಿಲ್ಲ’’ ಎಂದೂ ಅವರು ಹೇಳಿಕೊಂಡರು.
DART ಬಾಹ್ಯಾಕಾಶ ನೌಕೆಯನ್ನು ನವೆಂಬರ್ 23ರಂದು ಅಮೆರಿಕದ ಕ್ಯಾಲಿಫೋರ್ನಿಯಾದ ವಾಂಡೆನ್‌ಬರ್ಗ್ ಬಾಹ್ಯಾಕಾಶ ಪಡೆ ನೆಲೆಯಿಂದ ಪೆಸಿಫಿಕ್ ಸಮಯ ರಾತ್ರಿ 10:20 ಕ್ಕೆ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್‌ನಲ್ಲಿ ಉಡಾವಣೆ ಮಾಡಲು ನಿರ್ಧರಿಸಲಾಗಿದೆ.

ಮುಂದಿನ ವರ್ಷ ಘಟಿಸಲಿದೆ ಈ ವಿಸ್ಮಯ

ಉಡಾವಣೆಯು ಸಮಯಕ್ಕೆ ಸರಿಯಾಗಿ ನಡೆದರೆ, ಭೂಮಿಯಿಂದ ಸುಮಾರು 6.8 ಮಿಲಿಯನ್ ಮೈಲುಗಳಷ್ಟು ದೂರದಲ್ಲಿರುವ ಕ್ಷುದ್ರಗ್ರಹದೊಂದಿಗಿನ ಪರಿಣಾಮಗಳು 2022ರ ಸೆಪ್ಟೆಂಬರ್ 26 ಮತ್ತು ಅಕ್ಟೋಬರ್ 1ರ ನಡುವೆ ಸಂಭವಿಸುತ್ತದೆ ಎನ್ನಲಾಗಿದೆ. ಇದಕ್ಕಾಗಿ ಸಕಲ ತಯಾರಿ ಮಾಡಿಕೊಂಡಿದೆ ನಾಸಾ. ಈ ಪ್ರಯೋಗದ ಸಮಯದಲ್ಲಿ 1,210 ಪೌಂಡ್‌ಗಳಷ್ಟು ತೂಗುವ DART ಬಾಹ್ಯಾಕಾಶ ನೌಕೆಯು ಕ್ಷುದ್ರಗ್ರಹವನ್ನು “ನಾಶಗೊಳಿಸುವುದಿಲ್ಲ” ಎಂದು ಚಾಬೋಟ್ ಹೇಳಿದರು. ಇದು ಕ್ಷುದ್ರ ಗ್ರಹವನ್ನು ಕೇವಲ ಚಿಕ್ಕದಾಗಿ ತಳ್ಳುತ್ತದೆ. ಒಂದು ಸಣ್ಣ ಜೆರ್ಕ್ ಅಷ್ಟೇ. ಅಷ್ಟಕ್ಕೇ ಆ ದೊಡ್ಡ ಕ್ಷುದ್ರಗ್ರಹ ತನ್ನ ಮಾರ್ಗ ಬದಲಾವಣೆ ಆಗಲಿದ್ದು, ಅದರ ಕಕ್ಷೆಯ ಅವಧಿಯಲ್ಲಿ ಕೇವಲ 1 ಶೇಕಡಾ ಬದಲಾವಣೆಯಾಗಲಿದೆ ಎಂದು ಚಾಬೋಟ್ ಹೇಳಿದ್ದಾರೆ.

ಕ್ಷುದ್ರಗ್ರಹವು ಒಂದು ದಿನ ಭೂಮಿಯ ಕಡೆಗೆ ಹೋಗುವಾಗ ಅದನ್ನು ತಿರುಗಿಸಲು ಎಷ್ಟು ಆವೇಗದ ಅಗತ್ಯವಿದೆ ಎಂಬುದನ್ನು ವಿಜ್ಞಾನಿಗಳಿಗೆ ಅರ್ಥಮಾಡಿಕೊಳ್ಳಲು ಈ ಪರೀಕ್ಷೆಯನ್ನು ವಿನ್ಯಾಸಗೊಳಿಸಲಾಗಿದೆ. ದೊಡ್ಡ ವಿಚಲನ ಉಂಟುಮಾಡಲು ನಾವು ಸಾಧ್ಯವಾದಷ್ಟು ತಲೆಕೆಡಿಸಿಕೊಳ್ಳಲು ಗುರಿಯನ್ನು ಹೊಂದಿದ್ದೇವೆ” ಎಂದೂ ಚಾಬೋಟ್ ಹೇಳಿದರು.

- Advertisement -

Related news

error: Content is protected !!